ಸಿಂಧನೂರು : ಏ. 6 ರಂದು ತಾಲೂಕಿನ ಜವಳಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಲದಿನ್ನಿ ಕಡೆ ಹೊಲ ಗ್ರಾಮದ ಸರ್ವೆ ನಂಬರ್ 45 ರಲ್ಲಿ ಸುಮಾರು 30 ವರ್ಷಗಳ ಹಿಂದೆ 6 ಎಕರೆ 27 ಗುಂಟೆ ಸರ್ಕಾರದ ಸ್ವಾಧೀನದಲ್ಲಿರುವ ಭೂಮಿಯನ್ನು ಮಾನ್ಯ ತಾಸಿಲ್ದಾರ್ ಸಿಂಧನೂರು ಇವರು 1992 ರಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆ ಅಡಿಯಲ್ಲಿ 165 ಪ್ಲಾಟುಗಳನ್ನು ಮಾಡಿ ನಿವೇಶನ ರಹಿತರಿಗೆ ಹಂಚಿದ್ದು ನಂತರ 1994 ರಲ್ಲಿ ದೇವಪ್ಪ ತಂದೆ ಚಾಾಗಪ್ಪ ಎಂಬುವರು ಇದೇ ಸರ್ವೆ ನಂಬರಿನ ಪೈಕಿ 1ಎಕರೆ13 ಗುಂಟೆ ಹೊಲವನ್ನು ಖರೀದಿ ಮಾಡಿ ಗ್ರಾಮಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮಿಸಿದ್ದ ಹಿನ್ನೆಲೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದಾಗ ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸಿದ್ದರು.
ಈಗ ಅದೇ ದೇವಪ್ಪನ ಮಗ ಆಂಜನೇಯ ಗ್ರಾಮಕ್ಕೆ ಹೋಗುವ 18 ಪೀಟು ರಸ್ತೆ ಯನ್ನು ಅತಿಕ್ರಮಣ ಮಾಡಿ ರಸ್ತೆಯನ್ನು ಜೆಸಿಬಿಯಿಂದ ಅಗಿದು ಹಾಳು ಮಾಡಿದ್ದಾನು ಇದನ್ನು ಪ್ರಶ್ನಿಸಿ ಗ್ರಾಮದ ನಿವಾಸಿಗಳು ಸಿಂಧನೂರು ತಾಸಿಲ್ದಾರ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು ತಹಸೀಲ್ದಾರರು ಹೊಲದ ಮಾಲಿಕ ಆಂಜನೇಯನನ್ನು ಹಾಗೂ ಗ್ರಾಮಸ್ಥರನ್ನು ಕರಿಸಿ ಅಲ್ಲಿನ ಗ್ರಾಮಸ್ಥರಿಗೆ ತಿರುಗಾಡು ರಸ್ತೆ ಬಿಟ್ಟು ಕೊಡುಲು ಜಮೀನು ಮಾಲೀಕ ಆಂಜನೇಯನಿಗೆ ತಿಳಿ ಹೇಳಿದ ನಂತರ ರಸ್ತೆ ಬಿಟ್ಟುಕೊಡಲು ನನ್ನ ತಂಟೆ ತಕರಾರು ಇಲ್ಲವೆಂದು ಹೇಳಿದ ನಂತರ
ತಹಶೀಲಾರರು ಗ್ರಾಮಸ್ಥರಿಗೆ ನೀವು ಅಲ್ಲೇ ತಿರುಗಾಡಬಹುದು ಎಂದು ಹೇಳಿದ ಹಿನ್ನೆಲೆ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಿಂದ ಹಾಳಾದ ರಸ್ತೆಯನ್ನು ಟ್ಯಾಕ್ಟರ್ ಗಳಿಂದ ಮಣ್ಣು ಹಾಕುವ ಸಂದರ್ಭದಲ್ಲಿ ಹೊಲದ ಮಾಲೀಕ ಆಂಜನೇಯ ಇಲ್ಲಿ ಮರಮ ಹಾಕಲು ನಿಮಗೆ ಯಾರು ಹೇಳಿದ್ದು ಎಂದು ಖ್ಯಾತೆ ತೆಗೆಯುತ್ತಾನೆ. ಇಲ್ಲಿನ ಪರಿಸ್ಥಿತಿ ಬಿಗಡಾಯಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ ಎಂದು ದಲಿತ ಮುಖಂಡ ಚಿನ್ನಪ್ಪ ಹೆಡಗಿಬಾಳ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್ ಗ್ರಾಮ ಪಂಚಾಯತ್ ಸದಸ್ಯರು. ಮೋಹಿದ್ದಿನ್ ಗ್ರಾಮ ಪಂಚಾಯತಿ ಮಾಜಿ ಸದಸ್ಯರು. ರಾಮಾಂಜನೇಯ ದುರ್ಗಪ್ಪ ನಂದಪ್ಪ ಶಮಿದ್ ಸುರೇಖಾ ಕಟ್ಟಿಮನಿ ರೇಣುಕಾ ಸುನೀತ ಲಕ್ಷ್ಮಿ ಶಾಂತಮ್ಮ ಹುಲಿಗೆಮ್ಮ ಇನ್ನೂ ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ