ಸಿಂಧನೂರು : ಜುಲೈ 13 ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ಸೇನೆ ತಾಲೂಕಾಧ್ಯಕ್ಷ ಅಂಬಿರಾಜ್ ಮ್ಯಾಕಲ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಸಭೆ ಸೇರಿ ಪ್ರತಿ ತಿಂಗಳ ದಂತೆ ಈ ತಿಂಗಳು ಕಡು ಬಡವರನ್ನು ಹುಡುಕಿ ಅವರಿಗೆ ನಮ್ಮ ಸಂಘಟನೆ ವತಿಯಿಂದ ಪತಿ ಬಾರಿ ಒಂದು ತಿಂಗಳಿಗೆ ಆಗುವಷ್ಟು ದವಸ ಧಾನ್ಯ ಮತ್ತು ತರಕಾರಿಗಳನ್ನು ಆ ಬಡ ಕುಟುಂಬಕ್ಕೆ ನೀಡಲಾಗುತ್ತಿದ್ದು ಈ ತಿಂಗಳ ನಗರದ ಅಂಬೇಡ್ಕರ್ ಕಾಲೋನಿಯ ಯಲ್ಲಮ್ಮ ಕುಂಟ ಜಂಬಣ್ಣ ಸಿಂಧೂಳ್ಳ ಸಮುದಾಯದ ಕುಟುಂಬವನ್ನು ಗುರುತಿಸಿ ಅವರಿಗೆ ದವಸ ಧಾನ್ಯ ಮತ್ತು ತರಕಾರಿಗಳನ್ನು ನಮ್ಮ ಪದಾಧಿಕಾರಿಗಳ ಸಹಾಯದಿಂದ ವಿತರಿಸಲಾಯಿತು ಎಂದು ಅಧ್ಯಕ್ಷ ಅಂಬಿ ರಾಜ್ ಮ್ಯಾಕಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು
“ಪರಶುರಾಮ್ ವಕೀಲರು ಕಾನೂನು ಸಲಹೆಗಾರರಾಗಿ, ವಿಜಯಕುಮಾರ್ ಅಂಬೇಡ್ಕರ್ ನಗರ ಕಾರ್ಮಿಕ ನಗರ ಘಟಕ ಅಧ್ಯಕ್ಷರರಾಗಿ, ಶರಣು ಬಸವ ಸಾಲ್ಗುಂದ ಗ್ರಾಮ ಘಟಕ ಸದಸ್ಯರಾಗಿ, ಯಂಕಮ್ಮ ಹುಲುಗಪ್ಪ ನಗರ ಘಟಕ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು, ಸಮಾಜ ಸೇವೆಯಲ್ಲಿ ತೊಡಗಿರುವ ಸಿದ್ದು ಹೂಗಾರ್, ಪಿಯಾಜ್ ಪೀರ್, ನಾಗರಾಜ್ ಗಸ್ತಿ ಇವರನ್ನು ಸಂಘಟನೆ ವತಿಯಿಂದ ಗೌರವಿಸಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ. ತಾಲೂಕಾಧ್ಯಕ್ಷ ಅಂಬಿರಾಜ್ ಮ್ಯಾಕಲ್. ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷ ದುರುಗೇಶ್ ಬಾಲಿ, ತಾಲೂಕ ಪ್ರಧಾನ ಕಾರ್ಯದರ್ಶಿ , ವಿಜಯಕುಮಾರ್ ಅಂಬಾಮಠ, ತಾಲೂಕ ಉಪಾಧ್ಯಕ್ಷ ಎಂಡಿ. ಮುನ್ನ, ಕಾರ್ಮಿಕ ಘಟಕ ಕಾರ್ಯದರ್ಶಿ ಯಮನೂರು ಬಸಾಪುರ ಕೆ. ರಂಗಾಪುರ ಗ್ರಾಮ ಘಟಕ ಅಧ್ಯಕ್ಷ ಮಹಮ್ಮದ್, ಮಂಜುನಾಥ್ ಗ್ರಾಮೀಣ ಘಟಕ ಅಧ್ಯಕ್ಷ. ಗ್ರಾಮ ಘಟಕ ಅಧ್ಯಕ್ಷ ಮನುಕುಮಾರ್, ಫಾತಿಮಾ ಮಹಿಳಾ ಘಟಕ ತಾಲೂಕ ಅಧ್ಯಕ್ಷೆ, ರೇಣುಕ ನಾಯಕ್ ಮಹಿಳಾ ನಗರ ಘಟಕ ಅಧ್ಯಕ್ಷೆ, ಹುಲಿಗಮ್ಮ ತಾಲೂಕ ಉಪಾಧ್ಯಕ್ಷೆ ಇನ್ನಿತರ ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ