ಉದ್ಯೋಗಕ್ಕಾಗಿ ಬೀದಿಗಿಳಿದ ವಿದ್ಯಾರ್ಥಿಗಳ ಆಕ್ರೋಶ
ಅಥಣಿ: ಈ ಹೋರಾಟದಲ್ಲಿ ಭಾಗಿಯಾಗಿ ಅಥಣಿ ಗಚ್ಚಿನ ಮಠದ ಪರಮಪೂಜ್ಯ ಶ್ರೀ ಬಸವ ಮಹಾಸ್ವಾಮಿಗಳು ಮಾತನಾಡಿ ಇವತ್ತು ಎಲ್ಲಾ ಅಥಣಿ ತಾಲೂಕಿನ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕಲಿಕ್ಕೆ ವಿದ್ಯಾರ್ಥಿಗಳ ಉದ್ಯೋಗ ಬಹಳ ಮುಖ್ಯ ಇವತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಸರ್ಕಾರಗಳು ಸೇರಿ ಓದಿರುವಂತ ವಿದ್ಯಾರ್ಥಿಗಳಿಗೆ ಅವರಿಗೆ ವಿಶೇಷವಾಗಿರುವಂತಾ ಉದ್ಯೋಗ ಅವಕಾಶವನ್ನು ಕಲ್ಪಿಸಿ ಕೊಡಬೇಕು ಬೇಗನೆ ಸರಕಾರದಲ್ಲಿ ಖಾಲಿ ಇರುವ ಲಕ್ಷ ಲಕ್ಷ ಗಟ್ಟಲೆ ಉದ್ಯೋಗ ಖಾಲಿ ಇದಾವೆ ಉದ್ಯೋಗ ಕಾಲಿ ಇರುವ ಅವಗಳನ್ನು ಬೇಗ ಭರ್ತಿ ಮಾಡಿಕೊಳ್ಳಬೇಕು ಉದ್ದೇಶದಿಂದ ಯುವಕರು ಇಂದು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ.
ಇವತ್ತು ಯುವಕರ ಸಹನೆಯನ್ನು ಸರ್ಕಾರಗಳು ಉದಾಸೆ ಮಾಡಬಾರದು. ಈ ಜಗತ್ತಿನಲ್ಲಿ ದೊಡ್ಡ ಶಕ್ತಿ ಅಂದರೆ ಅದು ಯುವಶಕ್ತಿ ಜಗತ್ತಿನಲ್ಲಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ ಯುವಕರನ್ನು ಉದಾಸಿ ಮಾಡದೆ ಸರಕಾರದಲ್ಲಿ ಇರುವಂತ ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ವಕೀಲರು ಭಾಗವಹಿಸಿದ್ದರು.
ವರದಿ: ರಾಜು ವಾಘಮಾರೆ




