ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಶವಸಂಸ್ಕಾರ ಮಾಡಲು ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು….
ಇಂದು ಶಿಕ್ಷಕ ಲೋಕೇಶ್ ಎಂಬುವವರು ಮೃತ ಪಟ್ಟಿದ್ದು ಸ್ಮಶಾನಕ್ಕೆ ಹೊಗಲು ಸುವರ್ಣಾವತಿ ಹೊಳೆಯನ್ನು ದಾಟಲು ಸುಮಾರು 500 ರಿಂದ 600 ಜನರು ನೀರನ್ನು ಹಾದು ಹೊಗಲು ಹರಸಾಹಸ ಪಡುವುದನ್ನು ಗಮನಿಸಬಹುದಾಗಿದೆ….

ಪ್ರತಿ ಭಾರಿವು ಗ್ರಾಮದಲ್ಲಿ ಮೃತ ಪಟ್ಟವರನ್ನು ಅಂತ್ಯ ಸಂಸ್ಕಾರ ಮಾಡಲು ಸಮಸ್ಯೆ ಆಗುತ್ತಿದ್ದರು ಕಂಡು ಕಾಣದಂತೆ ವರ್ತಿಸುತ್ತಿರುವ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಶಾಪ ಹಾಕುತ್ತಿದ್ದಾರೆ.
ಗ್ರಾಮಸ್ಥರಾದ ಟೈಲರ್ ಮಹದೇವಯ್ಯ ಮತ್ತು ಅನಂತು ಮದ್ದೂರು ರವರು ಮಾತನಾಡಿ ಪ್ರತಿ ಬಾರಿ ಶವಸಾಗಿಸಲು ತೊಂದರೆ ಆಗುತ್ತಿರುವ ಕಾರಣ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳಿಗೆ ಪರಿ ಪರಿ ಪ್ರತಿಯಾಗಿ ಮನವಿ ಮಾಡಿದರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಹಾಗಾಗಿ ಸಂಬಂದಪಟ್ಟವರು ಸುವರ್ಣವತಿ ನದಿಗೆ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಶವಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಮಾಧ್ಯಮದ ಮೂಲಕ ಆಗ್ರಹಿಸಿದರು..
ವರದಿ :ಸ್ವಾಮಿ ಬಳೇಪೇಟೆ




