ಚಾಮರಾಜನಗರ : ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ ಚಾಮರಾಜನಗರದ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2025-26ರಲ್ಲಿ ದಿನಾಂಕ 10-09-2025ರಂದು “ಜೇನು ಕೃಷಿ ಹಾಗೂ ಕೀಟನಾಶಕಗಳ ಸುರಕ್ಷಿತ ಬಳಕೆ ವಿಚಾರ ಸಂಕಿರಣ ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಯಿತು.
ನಿಂಗರಾಜ್, . ಜ್ಞಾನೆಶ್, ಇಂದಿನ ವಿಷಯದ ಬಗ್ಗೆ ಪೋಸ್ಟರ್ಸ್ಗಳು, ಚಾರ್ಟಗಳು ಹಾಗೂ ಪವರ್ ಪಾಯಿಂಟ್ ಗಳ ಮೂಲಕ ತಮ್ಮ ವಿಚಾರವನ್ನು ರೈತರ ಮುಂದೆ ಪ್ರಸ್ತುತ ಪಡಿಸಿದರು
ಈ ಸಂಕಿರಣದಲ್ಲಿ ಜೇನುನೊಣ ಪ್ರಭೆದಗಳು,ಅದರ ಚಟುವಟಿಕೆ,ಸಾಕುವ ರೀತಿ , ಇಳುವರಿ ಹೆಚ್ಚುಸುವಲ್ಲಿ ಜೇನುನೊಣಗಳ ಮಹತ್ವ ಹಾಗೂ ತೋಟಗಾರಿಕ ಇಲಾಖೆಯಲ್ಲಿ ದೋರಕುವ ಸಬ್ಸಿಡಿ ಕುರಿತು ಮತ್ತು ಕೀಟನಾಶಕಗಳನ್ನು ಬಳಸುವ ಮುಂಚೆ,ಬಳಸಿದ ನಂತರ ಎದುರಾಗುವ ಸಮಸ್ಯೆಗಳಿಗೆ ಮುಂಜಾಗ್ರತೆಯಾಗಿ ಕೈಗೊಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಡಾ,ಮೌಲ್ಯ ಅವರು ಜೇನುಕೃಷಿ: ಗ್ರಾಮೀಣ ಆರ್ಥಿಕತೆಗೆ ಸಿಹಿ ಬೆಂಬಲ–ಜಾಗೃತಿಯಿಂದ ಕೀಟನಾಶಕ ಬಳಕೆ – ಪರಿಸರ ಮತ್ತು ರೈತರ ರಕ್ಷಣೆಗೆ”ಉಪಕಾರಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜನರೈತರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಕಾರ್ಯಕ್ರದಲ್ಲಿ ಡಾ,ಮೌಲ್ಯ ಎಂ.ಆರ್,ಸಹಾಯಕ ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಇವರು ಉಪಸ್ತಿತರಿದ್ದರು.
ವರದಿ : ಸ್ವಾಮಿ ಬಳೇಪೇಟೆ




