ನಾಲತವಾಡ : ಕಳೆದ 2-3 ತಿಂಗಳಿದಲೂ ಪಟ್ಟಣದ ಬೀದಿ ಬೀದಿಗಳಲ್ಲಿ ಹೆಚ್ಚುತ್ತೀರುವ ಬೀದಿ ನಾಯಿಗಳು ಗುರುವಾರ ಶಾಲಾ ಬಾಲಕನಿಗೆ ಸೇರಿ ಒಂದೇ ದಿನ 4-5 ಜನರ ಮೇಲೆ ಬಾರೀ ದಾಳಿ ಮಾಡುವ ಮೂಲಕ ಬಾರೀ ಪ್ರಮಾಣದಲ್ಲಿ ಗಾಯಗೊಳಿಸಿದ್ದು ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಜನ ಅಲೆದಾಡಲೂ ಭಯ ಪಟ್ಟಿದ್ದಾರೆ.

ಸುಮಾರು ಸಲ ಸ್ಥಳಿಯ ಪ.ಪಂ ಯವರಿಗೆ ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಮನವಿ ಮಾಡಿಕೊಂಡ ಕ್ಸಾರ್ವಜನೀಕರಿಗೂ ಜಪ್ಪೆನ್ನದ ಅಧಿಕಾರಿಗಳು ಸಿಬ್ಬಂದಿಗಳ ಬೇಜವಾಬ್ದಾರಿಗೆ ಒಂದೇ ದಿನ 4 ಜನ ನಾಯಿಗಳ ದಾಳಿಗೆ ಒಳಗಾದ ಜನ

ಸ್ಥಳಿಯ ಆಜಾದ್ ನಗರದಲ್ಲಿ ಸಾಕು ನಾಯಿವೊಂದು ರಸ್ತೆಗೆ ಬಂದು ಏಕಕಾಲಕ್ಕೆ ಓರ್ವ ಬಾಲಕ ಮತ್ತು ಯುವಕನಿಗೆ ದಾಳಿ ಮಾಡಿ ಗಾಯಗೊಳಿಸಿದ್ದರೆ ಮಾರುಕಟ್ಟೆಯಲ್ಲಿ ವೃದ್ದನ ಕಾಲಿಗೆ ಕಚ್ಚಿದ ಬೀದಿ ನಾಯಿ ಪರಿಣಾಮ ಸ್ಥಳಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಸ್ಥಳಿಯರ ಆಕ್ರೋಶ: ಸುಮಾರು ತಿಂಗಳಿದಲೂ ಬೀದಿ ನಾಯಿಗಳು ಪ.ಪಂ ಆವರಣ, ಬಸ್ ನಿಲ್ದಾಣ, ಶಾಲಾ ಆವರಣಗಳು ಸೇರಿ ಸಾರ್ವಜನೀಕ ಸ್ಥಳಗಳಲ್ಲೇ ಬಿಡಾರ ಹೂಡಿದ ವಿಷಯ ಗೊತ್ತಿದ್ದರೂ ಪ.ಪಂ ಯವರು ಸ್ಥಳಗಳತ್ತ ಮುಖ ಮಾಡಿಲ್ಲ, ದುರಂತವೆದರೆ ರಸ್ತೆ ರಸ್ತೆಯಲ್ಲೇ ಗುಂಪು ಗುಂಪಾಗಿ ಮಲಗುತ್ತಿದ್ದು ಸವಾರರಿಗೆ ಚಿಂತೆಗೀಡು ಮಾಡಿವೆ.
ಪ್ರಾಣಿ ಕಲ್ಯಾಣ ಸಂಸ್ಥೆಯ ನಿರ್ಲಕ್ಷ: ಪಟ್ಟಣವಲ್ಲದೇ ಇಡೀ ರಾಜ್ಯಾದ ಮೂಲೆ ಮೂಲೆಯಲ್ಲಿ ದಂಡು ದಂಡು ಬೀದಿ ನಾಯಿಗಳ ಹಾವಳಿ ಹೆಚ್ಚಾಗಿವೆ, ನಾಯಿಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಥಳಿಯ ಸಂಸ್ಥೆಗಳು ಕೈಕಟ್ಟಿ ಕುಳಿತಿದ್ದು ಆಕ್ರೋಶ ಉಂಟು ಮಾಡಿದೆ.
ಎಲ್ಲೆಂದರಲ್ಲಿ ವೇಸ್ಟ್ ಮಾಂಸ ಎಸೆತ: ಪಟ್ಟಣದಲ್ಲಿ ಅಲ್ಲಲ್ಲಿ ತಲೆ ಎತ್ತೀರುವ ಮಾಂಸದಗಡಿಗಳಿದ ಮನಬಂದ ಸ್ಥಳದಲ್ಲಿ ಎಸೆಯುತ್ತೀರುವ ಮಾಂಸಕ್ಕೂ ಬೀದಿ ನಾಯಿಗಳ ಉಪಟಳ ಹೆಚ್ಚಿದ್ದು ಅಧಿಕಾರಿಗಳು ಮಾಂಸದಗಡಿಯವರಿಗೆ ಎಲ್ಲೆಂದರಲ್ಲಿ ತ್ಯಾಜ ಮಾಂಸ ಎಸೆಯದಂತೆ ಕ್ರಮ ಜರುಗಿಸಬೇಕಿದೆ.
ಎಚ್ಚರಗೊಳ್ಳಬೇಕಿದೆ ಪ.ಪಂ ಯವರು: ನಿತ್ಯ ಸಾರ್ವಜನೀಕರಿಗೆ ತೊಂದರೆ ಕೊಡುತ್ತೀರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಬೇಕಿದೆ ನಿರ್ಲಕ್ಷ ಮುಂದುವರೆದಲ್ಲಿ ನಿತ್ಯ ಬೀದಿ ನಾಯಿ ದಾಳಿಗೆ ಒಳಗಾಗುವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ವರದಿ: ರಾಜು ಮುಂಡೆ




