ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೧ ನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವನ್ನು ೪೩ ರನ್‌ಗಳಿಂದ ಸೋಲಿಸಿ ಪಂದ್ಯಾವಳಿಯ ಎರಡನೇ ಗೆಲುವನ್ನು ಪಡೆಯಿತು.
ಸಿಕ್ಸರ್‌ಗಳ ಸುರಿಮಳೆ: ಆರ್‌ಸಿಬಿ ತಂಡವು ಮೊದಲು ಬ್ಯಾಟ್ ಮಾಡಿ ೨೫೦ ರನ್ ಗಳಿಸಿತು. ೨೦ ಓವರುಗಳ ಆಟದಲ್ಲಿ ೧೯ ಸಿಕ್ಸರ್‌ಗಳನ್ನು ಚಚ್ಚಿದ ಆರ್‌ಸಿಬಿ ತವರು ಪ್ರೇಕ್ಷಕರಿಗೆ ಕ್ರಿಕೆಟ್‌ನ ರಸದೌತಣ ನೀಡಿತು.
ಕೊನೆಯು ಐದು ಓವರುಗಳಲ್ಲಿ ೯೨ ರನ್ ಚಚ್ಚಿದ ನಾಯಕ ರಜತ್ ಪಟಿದಾರ ಹಾಗೂ ಟಿಮ್ ಡೆವಿಡ್ ಮೊತ್ತವನ್ನು ೨೫೦ ಕ್ಕೆ ಹಿಗ್ಗಿಸಿದರು.
ಪಂದ್ಯ ಗೆಲ್ಲಲು ಚೆನ್ನೆöÊ ಹೋರಾಟ: ಗೆಲುವಿನ ಮೊತ್ತ ದೊಡ್ಡದಾಗಿದ್ದರೂ ಗೆಲ್ಲಲು ಇನ್ನಿಲ್ಲದ ಹೋರಾಟ ನಡೆಸಿದ ಚೆನ್ನೆöÊ ಸೂಪರ್ ಕಿಂಗ್ಸ್ ಬ್ಯಾಟ್ಸಮನ್‌ಗಳು ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.
ಸ್ಕೋರ್ ವಿವರ
ಆರ್‌ಸಿಬಿ ೨೦ ಓವರುಗಳಲ್ಲಿ ೩ ವಿಕೆಟ್‌ಗೆ ೨೫೦
ಟಿಮ್ ಡೆವಿಡ್ ೭೦ (೨೫ ಎಸೆತ, ೩ ಬೌಂಡರಿ, ೮ ಸಿಕ್ಸರ್)
ರಜತ್ ಪಟಿದಾರ ೪೮ (೧೯ ಎಸೆತ, ೧ ಬೌಂಡರಿ, ೬ ಸಿಕ್ಸರ್)
ದೇವದತ್ತ ಪಡಿಕಲ್ ೫೦(೨೯ಎಸೆತ, ೫ ಬೌಂಡರಿ, ೨ ಸಿಕ್ಸರ್)
ಫಿಲಿಪ್ ಸಾಲ್ಟ್ ೪೬ (೩೦ ಎಸೆತ, ೩ ಬೌಂಡರಿ, ೨ ಸಿಕ್ಸರ್)
ವಿರಾಟ್ ಕೊಹ್ಲಿ ೨೮ (೧೮ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಚೆನ್ನೆöÊ ಸೂಪರ್ ಕಿಂಗ್ಸ್ ೧೯.೪ ಓವರುಗಳಲ್ಲಿ ೨೦೭
ಸರಫರಾಜ್ ಖಾನ್ ೫೦ (೨೫ ಎಸೆತ, ೮ ಬೌಂಡರಿ, ೨ ಸಿಕ್ಸರ್)
ಪ್ರಶಾಂತ ವೀರ ೪೩ (೨೯ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಜೆಮ್ಮಿ ಓವರಟನ್ ೩೭ (೧೬ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಭುವನೇಶ್ವರ ಕುಮಾರ್ ೪೧ ಕ್ಕೆ ೩
ಚಿನ್ನಸ್ವಾಮಿ ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆ: ಆರ್‌ಸಿಬಿಗೆ ಎರಡನೇ ಜಯ




