ವಿಜಯಪುರ : ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗುವ ಸಂಭವ ವಿಚಾರವಾಗಿ ಸಿದ್ದರಾಮಯ್ಯ ಹೊಳಿಮಠದ ಕಾಲಜ್ಞಾನ ಸ್ಫೋಟಕ ಭವಿಷ್ಯವಾಣಿ ಹೊರ ಬಿದ್ದಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಆಂತರಿಕ ಸಂಘರ್ಷದ ನಡುವೆಯೇ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳಿಮಠದ ಕಾಲಜ್ಞಾನದ ಭವಿಷ್ಯವಾಣಿ ಮಹತ್ವ ಪಡೆದುಕೊಂಡಿದೆ.ಮಠದ ಸದಾಶಿವ ಮುತ್ಯಾರ ಭವಿಷ್ಯವಾಣಿ ಬಹುತೇಕ ನಿಜವಾಗುತ್ತವೆ ಎಂಬ ನಂಬಿಕೆ ಇದೆ.
ಹೊಳಿ ಬಬಲಾದಿಯಲ್ಲಿರುವ ಸದಾಶಿವ ಮುತ್ಯಾನ ಮಠದ ವಿಚಾರವಾಗಿ ಸಾವಿರಾರು ಭಕ್ತರು ನಂಬಿಕೆ ಇಟ್ಟುಕೊಂಡಿದ್ದಾರೆ. ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವು ಪಡೆಯಲಿದೆ. ಬರಗಾಲದ ಮುನ್ಸೂಚೆ ಇದೆ. ಕಲಿಯುಗದ ಆಟ ಸರ್ವನಾಶ ಆಗುವ ಸಮಯ ಬಂದಿದೆ ಎಂದು ಸಿದ್ದರಾಮಯ್ಯ ಹೊಳಿಮಠ ಕಾಲಜ್ಞಾನ ಭವಿಷ್ಯವಾಣಿ ನುಡಿಯಲಾಗಿದೆ.




