ಬೆಂಗಳೂರು : ಒಂದೆಡೆ ರಾಜ್ಯದಲ್ಲಿ ಬಸ್ ಟಿಕೆಟ್ ಪ್ರಯಾಣದ ದರ, ಹಾಲು, ವಿದ್ಯುತ್, ಪೆಟ್ರೋಲ್, ಮೆಟ್ರೋ ಪ್ರಯಾಣದ ಟಿಕೆಟ್ ರೇಟ್ ಹೆಚ್ಚಳದಿಂದ ಜನ ನಲುಗಿಹೋಗಿದ್ದಾರೆ.
ಇದರ ನಡುವೆಯೇ ರಾಜ್ಯ ಸರ್ಕಾರ ಶಾಸಕರ ಸಂಬಳವನ್ನು ಶೇ.50ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ.ಇಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಶಾಸಕರ ಸಂಬಳವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಕಲಾಪ ಸಲಹಾ ಸಮಿತಿಯಲ್ಲಿ ನಡೆದ BAC ಸಭೆಯಲ್ಲಿ ಶಾಸಕರ ಶೇ.50 ರಷ್ಟು ಸಂಬಳ ಹೆಚ್ಚಳ ಮಾಡಲು ನಿರ್ಣಯಿಸಲಾಗಿದ್ದು, ವೇತನ ಹೆಚ್ಚಳ ಮಾಡಬೇಕು ಎಂದು ಕಳೆದ ಬಾರಿ ಅಧಿವೇಶನದಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಒತ್ತಾಯಿಸಿದ್ದರು.
ಇದೀಗ ಶಾಸಕರ ಸಂಬಳ ಹೆಚ್ಚಳಕ್ಕೆ ಕಲಾಪ ಸಲಹಾ ಸಮಿತಿ ಮಹತ್ವದ ನಿರ್ಣಯಕೈಗೊಂಡಿದೆ. ಈ ನಿಟ್ಟಿನಲ್ಲಿ ಶಾಸಕರ ಕ್ಲಬ್ಗೆ ರೂ.20 ಕೋಟಿ ಅನುದಾನಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.




