Ad imageAd image

ಹಳ್ಳ ಹಿಡಿದ ಯೋಜನೆ, ಇಂಜಿನೀಯರಿಂಗ್ ಕಛೇರಿ ಮುಂದೆ ಕಿರು ಹೊಂಡ

Bharath Vaibhav
ಹಳ್ಳ ಹಿಡಿದ ಯೋಜನೆ, ಇಂಜಿನೀಯರಿಂಗ್ ಕಛೇರಿ ಮುಂದೆ ಕಿರು ಹೊಂಡ
WhatsApp Group Join Now
Telegram Group Join Now

ಸಿರುಗುಪ್ಪ : –ನಗರದಲ್ಲಿನ ಸಿ.ಡಿ.ಪಿ.ಓ, ತಾಲೂಕು ಪಂಚಾಯಿತಿ, ಪಂಚಾಯತ್ ರಾಜ್ ಇಂಜನೀಯರಿಂಗ್ ಉಪವಿಭಾಗ ಕಛೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಮುಂಭಾಗದಲ್ಲಿ ಸರೋವರದಂತೆ ಮಳೆ ನೀರು ನಿಂತಿದ್ದು ಅಭಿವೃದ್ದಿಗೆ ಬಳಕೆಯಾದ ಅನುದಾನ ಮಣ್ಣು ಪಾಲಾಗುತ್ತಿದೆ.ಕೆಲ ವರ್ಷಗಳ ಹಿಂದೆಯಷ್ಟೇ ಮಳೆಗಾಲದಲ್ಲಿ ಆಗುವ ತೊಂದರೆಯನ್ನು ತಪ್ಪಿಸಲು ಯೋಜನೆ ರೂಪಿಸಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಟೈಲ್ಸ್ ಅಳವಡಿಕೆ ಮಾಡಲಾಗಿದೆ.

ಆದರೆ ಮಳೆಯ ನೀರು ಹೊರ ಹೋಗಲು ಸೂಕ್ತ ಯೋಜನೆ ರೂಪಿಸದ ಅಧಿಕಾರಿಗಳ ಯಡವಟ್ಟಿನಿಂದ ವಿಶೇಷ ಚೇತನ ಕಛೇರಿಗೆ ಬರುವ ವಿಶೇಷ ಚೇತನರಿಗೆ ಹಾಗೂ ಇನ್ನಿತರ ಕಛೇರಿಗಳಿಗೆ ಅಲೆಯುವ ಸಾರ್ವಜನಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.ತಮ್ಮ ಕಛೇರಿಯ ಮುಂಭಾಗದಲ್ಲಿಯೇ ಲಕ್ಷಾಂತರ ಅನುದಾನವನ್ನು ವ್ಯರ್ಥವಾಗಿಸಿದ್ದಾರೆ. ಅಲ್ಲದೇ ನೂತನ ಕಛೇರಿಯ ಮೇಲೆಯೇ ಮಳೆ ನೀರು ನಿಲ್ಲುವಂತೆ ನಿರ್ಮಿಸಲಾಗಿದ್ದು, ತಾಲೂಕಿನೆಲ್ಲೆಡೆ ಯಾವ ರೀತಿ ಯೋಜನೆಗಳನ್ನು ರೂಪಿಸಿರಬಹುದೆಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಳೆಗಾಲದಲ್ಲಿ ಒದ್ದೆಯಾಗುವ ಮಣ್ಣಿನಿಂದ ರಸ್ತೆಗಳು ಕೆಸರುಗದ್ದೆಯಾವುದನ್ನು ತಪ್ಪಿಸಲು ಹೋಗಿ ತಮ್ಮ ಕಛೇರಿ ಮುಂಭಾಗದಲ್ಲಿ ಕಿರು ಜಲಾಶಯವನ್ನು ನಿರ್ಮಿಸಿಕೊಂಡಿರುವುದನ್ನೇ ಕಾಣಬಹುದಾಗಿದೆ.ಅಲ್ಲದೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳು ಶಿಥಿಲಗೊಂಡಿವೆ. ಕೆಲವು ಗ್ರಾಮಗಳಲ್ಲಿ ಬಸ್ ನಿಲ್ದಾಣವೇ ಇಲ್ಲದೇ ತಾಲೂಕು ಕೇಂದ್ರ ಹಾಗೂ ಇನ್ನಿತರ ಗ್ರಾಮಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು, ರೋಗಿಗಳು, ಬಿಸಿಲು ಮಳೆಯನ್ನು ಲೆಕ್ಕಿಸದೇ ರಸ್ತೆ ಬದಿ ನಿಲ್ಲುವ ಅನಿವಾರ್ಯತೆ ಬಂದೊದಗಿದೆ.

ಈ ಇಲಾಖೆಯ ವ್ಯಾಪ್ತಿಗೊಳಪಡುವ ಅನೇಕ ಸಹಾಯಕ ಅಭಿಯಂತರರು ಕಿರು ಅಂಭಿಯಂತರರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರಗಳ ಕೊಠಡಿಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣವು ಹಲವು ವರ್ಷಗಳೇ ಕಳೆದರೂ ಕಾಮಗಾರಿ ಆಮೆಗತಿಯಲ್ಲಿರುವುದು ಈ ಇಲಾಖೆಯ ಕಾರ್ಯವೈಖರಿ ಎದ್ದುಕಾಣುತ್ತಿದೆ.

ವರದಿ ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!