Ad imageAd image
- Advertisement -  - Advertisement -  - Advertisement - 

ಹೂವಿನಹಡಗಲಿ:ಅನಾರೋಗ್ಯ ಪೀಡಿತ ಅನಾಥೆ ವೃದ್ಧೆಗೆ ಉಪಚರಿಸಿ ಸೇವೆ ಮಾಡಿದ-ಸಮಾಜ ಸೇವಕಿ

Bharath Vaibhav
ಹೂವಿನಹಡಗಲಿ:ಅನಾರೋಗ್ಯ ಪೀಡಿತ ಅನಾಥೆ ವೃದ್ಧೆಗೆ ಉಪಚರಿಸಿ ಸೇವೆ ಮಾಡಿದ-ಸಮಾಜ ಸೇವಕಿ
WhatsApp Group Join Now
Telegram Group Join Now

*ಹೂವಿನಹಡಗಲಿ:ಅನಾರೋಗ್ಯ ಪೀಡಿತ ಅನಾಥೆ ವೃದ್ಧೆಗೆ ಉಪಚರಿಸಿ ಸೇವೆ ಮಾಡಿದ-ಸಮಾಜ ಸೇವಕಿ*

 

 

ರೈತ ಮುಖಂಡರಾದ ಯಶೋಧ : ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದಲ್ಲಿ,ಅನಾರೋಗ್ಯದಿಂದ ನರಳುತ್ತಿರುವ ವಯೋ ವೃದ್ಧೆಯ ಸೇವೆಯನ್ನು ಮಾಡಿ. ಅವಳನ್ನು ಖುದ್ದು ಉಪಚರಿಸಿ ಸಾರ್ವ ಜನಿಕ ಆಸ್ಪತ್ರೆೆಗೆ ಚಿಕಿತ್ಸೆಗೆ ದಾಖಲಿಸುವ ಮೂಲಕ, ಸಮಾಜ ಸೇವಕಿ ಹಾಗೂ ರೈತ ಮುಖಂಡರಾದ ಯಶೋಧರವರು ಮಾನವೀಯತೆ ಮೆರೆದರು.

 

ಈ ಅಪರೂಪದ ಸನ್ನಿವೇಶ ಜುಲೈ13ರಂದು ಜರುಗಿದೆ. ಪಟ್ಟಣದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ವಾಸವಿರುವ, ದಲಿತ ಸಮುದಾಯದ 80 ವರ್ಷದ ವಯೋ ವೃದ್ಧೆ ಪಾರಮ್ಮಳು. ಬಹು ದಿನಗಳಿಂದ ವಯೋಸಹಜ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಅನಾಥೆಯಾಗಿರುವ ಆಕೆ ಚಿಕಿತ್ಸೆ ಕಾಣದೇ ನರಳುತ್ತಿದ್ದಳು. ಹಲವು ವರ್ಷಗಳ ಹಿಂದೆಯೇ ಪತಿಯನ್ನ ಕಳೆದುಕೊಂಡ ಪಾರಮ್ಮ, ಕೆಲ ವರ್ಷಗಳ ಹಿಂದೆಯಷ್ಟೇ ತನ್ನ ಇಬ್ಬರು ಪುತ್ರರನ್ನೂ ಕಳೆದು ಕೊಂಡು ಅಕ್ಷರಸಃ ಅನಾಥೆಯಾಗಿದ್ದಾಳೆ. ದಲಿತ ಸಮುದಾಯದ (ST) ವಯೋವೃದ್ಧೆ ಪಾರಮ್ಮಳು, ಯಾವ ಸಂಬಂಧಿಕರನ್ನು ಹೊಂದಿರದೇ ಏಕಾಂಗಿಯಾಗಿಯೇ ತನ್ನ ಸ್ವಗೃಹದಲ್ಲಿ ವಾಸವಿದ್ದಳು. ಈ ವೃದ್ಧೆಗೆ ಹೂವಿನಹಡಗಲಿ ಪಟ್ಟಣ ಸೇರಿದಂತೆ, ತಾಲೂಕು ನೆರೆ ಹೊರೆ ತಾಲೂಕುಗಳಲ್ಲಿಯಾಗಲೀ ಯಾರೂ ಸಂಬಂಧಿಕರು ಪತ್ತೆಯಾಗಿಲ್ಲ ಎಂಬುದು ಪ್ರಾಥಮಿಕ ಹಂತದಲ್ಲಿ ಮನವರಿಕೆಯಾಗಿದೆ. ಪಾರಮ್ಮ ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿರುವಾಗ, ದೈನಂದಿನ ಕಾರ್ಯ ಚಟುವಟಿಕೆಗಳ ನಿರ್ವಹಣೆ ಸಂದರ್ಭದಲ್ಲಿ ಆಕಸ್ಮಿಕ ಗಾಯಗಳಾಗಿವೆ. ಪರಿಣಾಮ ತನ್ನ ಆಹಾರವನ್ನು ತಾನೇ ತಯಾರಿಸಿಕೊಂಡು, ಅಥವಾ ಹತ್ತಿರದ ಹೋಟೆಲ್ ಗಳಿಂದ ಆಹಾರ ತರಿಸಿಕೊಂಡು ನಿತ್ಯ ಜೀವನವನ್ನು ನರಳುತ್ತಲೇ ಸವಿಸುತ್ತಿದ್ದ ವೃದ್ಧೆ ಪಾರಮ್ಮಳಿಗೆ. ಗಾಯಗಳ ಭಾದೆಯಿಂದಾಗಿ ಅಕ್ಷರಸಃ ನಿತ್ಯ ನರಕ ಯಾತನೆ ಅನುಬಿಸಿದ್ದಾಳೆ, ಇದರಿಂದಾಗಿ ತೀವ್ರ ಅಸ್ವಸ್ಥರಾಗಿರುವ ಪಾರಮ್ಮ ಚೇತರಿಸಿಕೊಳ್ಳಲಾಗದೇ ಇದ್ದ ಜಾಗದಲ್ಲಿಯೇ ಕೆಲ ದಿನಗಳಿಂದ ನರಳಾಡಿದ್ದಾಳೆ.

 

 

ಇದನ್ನರಿತ ನೆರೆ ಹೊರೆಯ ಕೆಲವರು ಅವಳಿಗೆ ನೀರು ತಿನ್ನಲು ಆಹಾರ ಅನ್ನಾದಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದು, ಆದ್ರೆ ಅವಳಿಗೆ ಅಗತ್ಯ ತುರ್ತು ಚಿಕಿತ್ಸೆ ದೊರಕಿಲ್ಲ ಪರಿಣಾಮ ಗಾಯ ಕೊಳೆತು ಹುಳಗಳು ಸೃಷ್ಟಿಯಾಗಿವೆ. ಜೊತೆಗೆ ವೃದ್ಧೆ ಗಾಯಗೊಂಡು ಬಿದ್ದಲ್ಲೇ ಮಲ ಮೂತ್ರ ಎಲ್ಲಾ ಆಗಿರುವುದರಿಂದಾಗಿ, ಸ್ವಚ್ಚತೆ ಕಾಣದೇ ತೀವ್ರ ದುರ್ನಾಥ ಬೀರಿದ್ದಾಳೆ. ಅವಳ ವಾಸಸ್ಥಳವೆಲ್ಲಾ ಭಾರೀ ದುರ್ನಾಥ ಹೊಂದಿರುವ ಪರಿಣಾಮ ಅವಳಿಗೆ ಅನ್ನಾದಿ ಆಹಾರ ಆಹಾರ ನೀಡುತ್ತಿದ್ದವರೂ ಕೂಡ, ಸಹಜವಾಗಿಯೇ ಅವಳ ಬಳಿ ತೆರಳಲು ಹಿಂದೇಟು ಹಾಕಿದ್ದಾರೆ. ಪರಿಣಾಮ ಅನಾರೋಗ್ಯ ಪೀಡಿತೆ ಗಾಯಾಳು ವಯೋವೃದ್ಧೆ, ಕೆಲ ದಿನಗಳಿಂದ ಸರಿಯಾದ ಸಮಯಕ್ಕೆ ಅನ್ನ ನೀರು ಕಾಣದೇ ಬಿದ್ದಲ್ಲೇ ನರಳಾಡಿದ್ದಾಳೆ ಕಿರಿಚಾಡಿದ್ದಾಳೆ ಆಕ್ಷರಸಃ ನಿತ್ಯ ನರಕಯಾತೆ ಅನುಭವಿಸಿದ್ದಾಳೆ ವೃದ್ಧೆ ಪಾರಮ್ಮ. ಪಟ್ಟಣದ ವಾಸಿಗಳು ಹಾಗೂ ರೈತ ದಲಿತ ಮಹಿಳಾ ಪರ ಹೋರಾಟಗಾರ್ತಿ, ಸಮಾಜ ಸೇವಕಿ ಯಶೋಧರವರು ಆಕಸ್ಮಿಕವಾಗಿ ಪಾರಮ್ಮಳ ವಾಸಸ್ಥಳಕ್ಕೆ ತೆರಳಿದ್ದಾಳೆ.

 

ವೃದ್ಧೆಯ ಮನೆಯ ಹತ್ತಿರದವರಾದ ಯೋದರವರ ಗೆಳತಿ ರೇಖಾರವರು, ಅಜ್ಜಿಯ ದುರಂತವನ್ನೆಲ್ಲಾ ಸವಿಸ್ತರವಾಗಿ ವಿವರಿಸಿದ್ದಾರೆ. ಅದನ್ನೆಲ್ಲಾ ಆಲಿಸಿದ ಸಹೃದಯವಂತೆ ಸಮಾಜ ಸೇವಕರಾದ, ಯಶೋಧರವರು ತಕ್ಷಣವೇ ಏಕಾಂಗಿಯಾಗಿ ಅಜ್ಜಿಯ ನೆರವಿಗೆ ದಾವಿಸಿದ್ದಾರೆ. ಹೇಸಿಗೆ ಹೊಲಸು ರಜ್ಜಿನಲ್ಲಿ ಮಿಂದೆದ್ದಿರುವ ಗಾಯದಲ್ಲಿ ಹುಳತುಂಬಿದ್ದ, ದುರ್ನಾಥ ಬೀರಿ ನರಕಯಾತೆಯಲ್ಲಿದ್ದ ವೃದ್ಧೆಯ ನೆವಿಗೆ ನಿಂತಿದ್ದಾರೆ. ಮದ್ಯಮ ಸ್ಥಿತಿವಂತರಾದ ಯಶೋಧರವರು ತಮ್ಮ ಮನೆಯಲ್ಲಿದ್ದ ಸುಸ್ಥಿತವಾದ ತಮ್ಮ ಉಡುಪನ್ನು ತಂದು, ಅಜ್ಜಿಗೆ ಬಿಸಿನೀರು ಕಾಸಿ ತಾವೇ ಖುದ್ದು ಸ್ನಾನ ಮಾಡಿಸಿದ್ದಾರೆ.

 

ಇದಕ್ಕೂ ಮೊದಲು ಅಜ್ಜಿಯನ್ನು ಆ ದುರ್ನಾಥ ಬೀರುವ ಹೊಲಿಸಿನಿಂದ ಹೊರ ತಂದಿದ್ದಾರೆ, ಹಾಗೂ ಅಕ್ಷರಸಃ ಹೇಸಿಗೆ ದುರ್ನಾಥ ತುಂಬಿದ್ದ ಅಜ್ಜಿಯ ಮನೆಯನ್ನು ತಾವೇ ಸ್ವತಃ ಸ್ವಚ್ಚವಾಗಿದ್ದಾರೆ. ಶುಚಿರ್ಭೂತರಾಗಿರುವ ಅಜ್ಜಿಯನ್ನು ಸ್ವಚ್ಚಂದಗೊಳಿಸಿಕೊಂಡು, ಆಹಾರಾಧಿ ನೀಡಿ ಉಪಚಾರ ಮಾಡಿದ್ದಾರೆ. ನಂತರ ಅಜ್ಜಿಯನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು, ಸೂಕ್ತ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣ ಆಸ್ಪತ್ರೆಯಲ್ಲೇ ದಾಖಲಿಸಿದ್ದಾರೆ. ಈ ಮೂಲಕ ಸಮಾಜ ಸೇವಕರಾದ ಯಶೋಧರವರು, ನರಕದಲ್ಲಿ ನರಳಾಡುತ್ತಿದ್ದ ವಯೋವೃದ್ಧೆಯನ್ನು ನರಕದಿಂದ ಪಾರು ಮಾಡಿದ್ದಾರೆ. 

 

 

*ಶಿಕ್ಷಣ ಪ್ರೇಮಿ ಹೋರಾಟಗಾರರು*- ದಲಿತ ಮದ್ಯಮ ವರ್ಗದ ಕುಟುಂಬದಲ್ಲಿ ಬೆಳದಿರುವ ಯಶೋಧರವರು, ದಲಿತ ಕಾರ್ಮೀಕರ ರೈತರ ಶೋಷಿತ ಮಹಿಳೆಯರ ವಿದ್ಯಾರ್ಥಿಗಳ ನಾಡಿ ಮಿಡಿತ ಬಲ್ಲವರಾಗಿದ್ದಾರೆ ಯಶೋಧರವರು. ಅವರು ಯಾರಿಗೇ ಅನ್ಯಾಯವಾದಲ್ಲಿ ತಾವು ರೈತ ಶ್ಯಾಲನ್ನು ಹೆಗಲೇರಿಸಿಕೊಂಡು ಹೋರಾಟಕ್ಕೆ ಸನ್ನದ್ಧರಾಗುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಆಶಾಕಿರಣದಂತೆ ಸೇವೆ ಮಾಡುತ್ತಾರೆ, ನೊಂದ ಮಹಿಳೆಯರ ಪರ, ಕಾರ್ಮಿಕರ ರೈತರ ಪರ ನ್ಯಾಯಕ್ಕಾಗಿ ಮುಂಚೂಣಿಯಲ್ಲಿರುತ್ತಾರೆ ಯಶೋಧರವರು. ಇವರು ಅನಾಥ ವೃದ್ಧೆ ಪಾರಮ್ಮಳಿಗೆ ಉಪಚರಿಸುವುದಕ್ಕೆ, ಸಮಾಜ ಸೇವಕರು ಹೋರಾಟಗಾರರು ಹಾಗೂ ಜನ ಪ್ರತಿನಿಧಿಗಳು, ಯಶೋಧರವರ ನಿರಾಪೇಕ್ಷಿತ ಸೇವೆಯನ್ನು ಸಾರ್ವಜನಿಕವಾಗಿ ಹಾಡಿ ಹೊಗಳುತ್ತಿದ್ದಾರೆ. ಮಾತೃ ಹೃದಯಿ ಯಶೋಧರವರ ಈ ಮಾನವೀಯ ಕಾರ್ಯಕ್ಕೆ, ಸಮಸ್ತ ಮನುಕುಲದ ಪರವಾಗಿ ಈ ಮೂಲಕ ನಾವು ಕೂಡ ಅವರಿಗೆ ಅನಂತಾನಂತ ವಂದನೆಗಳು,

ವಿ.ಜಿ.ವೃಷಭೇಂದ್ರ .

WhatsApp Group Join Now
Telegram Group Join Now
Share This Article
error: Content is protected !!