ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ರೋಜ್ಗಾರ್ ಮತ್ತು ಆಜೀವಿಕ ಮಿಷನ್( ವಿಬಿ ಜಿ ರಾಮ್ ಜಿ) ಬಗ್ಗೆ ಚರ್ಚೆ ನಡೆಸಲು ಜನವರಿ 14ರಂದು ಬೆಳಗ್ಗೆ 11:30ಕ್ಕೆ ವಿಶೇಷ ತುರ್ತು ಸಚಿವ ಸಂಪುಟ ಸಭೆ ಕರೆಯಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ಮಾಡಿ ಸ್ವರೂಪ ಬದಲಾಯಿಸಿರುವುದನ್ನು ವಿರೋಧಿಸಿ ವಿಶೇಷ ಅಧಿವೇಶನ ಕರೆಯುವ ಬಗ್ಗೆ ತುರ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
2025 ನೇ ಸಾಲಿನ ಅಧಿವೇಶನ ಮುಕ್ತಾಯವಾಗಿದೆ. 2026 ನೇ ಸಾಲಿನ ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಬೇಕಿದೆ.
ಅದಕ್ಕಿಂತ ಮೊದಲೇ ವಿಶೇಷ ಅಧಿವೇಶನ ಕರೆಯುವ ಪರಂಪರೆ ಇಲ್ಲ. ವಿಶೇಷ ಅಧಿವೇಶನದಲ್ಲೇ ರಾಜ್ಯಪಾಲರ ಭಾಷಣಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ಇದೆ. ರಾಜ್ಯಪಾಲರ ಭಾಷಣದಲ್ಲೇ ಮನರೇಗಾ ಬಗ್ಗೆ ಪ್ರಸ್ತಾಪ ಮಾಡುವ ಚಿಂತನೆ ಕೂಡ ಇದೆ.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ತುರ್ತು ಸಚಿವ ಸಂಪುಟ ಸಭೆ ನಡೆಯಲಿದ್ದು, ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ವಿಶೇಷ ಅಧಿವೇಶನ ಕರೆಯುವ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುವುದು.




