ಮೊಳಕಾಲ್ಮೂರು : ಪ್ರತಿವರ್ಷದಂತೆ ಈ ವರ್ಷವೂ ಕೂಡ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾದೇವಿ 9 ದಿನಗಳ ಹಾಲಾ ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ ಈ ದಿನ ಎಂಟನೇ ದಿನ ಪ್ರಯುಕ್ತ ವಿಶೇಷ ಪೂಜೆ ಮತ್ತು ಮಾತೇಯರಿಂದ ಸಹಸ್ರನಾಮಾವಳಿ ವಿಶೇಷ ಪೂಜೆಗಳು ನೆರವೇರಿಸಿದರು ಎಂದು ಸೊಕ್ಕುಳ ಸಾಲಿ ಅಧ್ಯಕ್ಷರಾದ ಶ್ರೀ ನರೇಂದ್ರ ಕುಮಾರ್ ಗಾಯಕ್ವಡ್ ರವರು ತಿಳಿಸಿದರು.
ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಸಕ್ಳಸಾಲಿ ಸಮಾಜದ ವತಿಯಿಂದ ನವರಾತ್ರಿಯ ಪ್ರತಿದಿನವೂ ಒಂದೊಂದು ಪೂಜೆಗಳನ್ನು ನೆರವೇರಿಸಿ ವಿವಿಧ ಕೈ ಕಾರ್ಯಗಳನ್ನು ನೆರವೇರಿಸಿ ಸಹಸ್ರನಾಮಾವಳಿ, ಈ ದಿನ ಎಂಟನೇ ದಿನ ದುರ್ಗಾಸ್ತಮಿ ಇರುವುದರಿಂದ ದುರ್ಗಾದೇವಿಗೆ ವಿಶೇಷ ಅಲಂಕಾರ ನೆರವೇರಿಸಿದ್ದೇವೆ ಎಂದರು.
ಎರಡನೇ ತಾರೀಕು ದೇವಿಯನ್ನು ಬನ್ನಿಮಂಟಪಕ್ಕೆ ಕರೆದೆಯಲಾಗುತ್ತದೆ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಿ ವಿಶೇಷ ಪೂಜೆಗಳು ನೆರವೇರಲಿವೆ ಎಂದರು.
ಈ ಸಂದರ್ಭದಲ್ಲಿ ದುರ್ಗಾದೇವಿಯ ಉಸ್ತುವಾರಿಗಳಾದ ಜಿಂದಾ ಪಕೀರಪ್ಪ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪಾಂಡುರಂಗಪ್ಪ ಧನಂಜಯ ವಿನಯ್ ಕುಮಾರ್ ಸತೀಶ್ ಕಾಂಬಳೆ ಆನಂದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಮತಿ ಶೋಭಾ ಪೃಥ್ವಿರಾಜ್, ನಾಗವೇಣಿ ಗಾಯಕ್ವಾಡ್ ಪಾರ್ವತಮ್ಮ ವಾಣಿ ಗಾಯಕ್ವಾಡ್ ಇನ್ನು ಅನೇಕ ಸುಕ್ಕಳಿ ಸಾಳಿ ಸಮಾಜದ ಮಾತೆಯರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




