ಸೇಡಂ : ತಾಲೂಕಿನ ಕೊಡ್ಲಾ ಗ್ರಾಮದ ಶ್ರೀ ಉರಿಲಿಂಗಪೆದ್ದಿಶ್ವರ ಮಹಾಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಪರಮ ಪೂಜ್ಯ ಶ್ರೀ ಜ್ಞಾನಪ್ರಕಾಶ್ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಪ್ರತಿನಿತ್ಯ ಶ್ರೀ ಮಠದ ಭಕ್ತಾದಿಗಳು ಹಾಗೂ ಮಕ್ಕಳೊಂದಿಗೆ ಬಸವ ಪ್ರಾರ್ಥನೆ, ಬಸವ ಸ್ತುತಿ ಹಾಗೂ ಬಸವ ಅಷ್ಟೋತ್ತರ ಶತನಾಮಾವಳಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಭಕ್ತಾದಿಗಳಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




