ಬಾಗಲಕೋಟೆ: ತುಳಸಿಗೇರಿ ಗ್ರಾಮದ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯ 2ನೇ ತಿರುಪತಿಯಂದು ಪ್ರಸಿದ್ಧ ಪಡೆದಿರುವ ಭಕ್ತರ ಆರಾಧ್ಯ ದೈವ ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನ ತುಳಸಿಗೇರಿ ಶ್ರೀ ಮಾರುತೇಶ್ವರ ಜಾತ್ರೆಯಲ್ಲಿ ಆಗಮಿಸಿದ್ದ ಭಕ್ತರೊಬ್ಬರು ಗಿರಿಯಪ್ಪ ಸಿದ್ದಪ್ಪ ಸಂಗಳದ ಹಿರೇಶೆಲ್ಲಿಕೇರಿ ಗ್ರಾಮದ ಇವರು ತಮ್ಮ ಎರಡು ವರ್ಷದ ಹೆಣ್ಣು ಮಗಳಾದ ರಕ್ಷಿತಾ ಗಿರಿಯಪ್ಪ ಸಂಗಳ ಕಳೆದುಕೊಂಡಿದ್ದರು.
ಬಾಗಲಕೋಟೆ ಜಿಲ್ಲೆಯ ಪ್ರವಾಸಿ ಮಿತ್ರಗಳಾದ ಶಿವಾನಂದ ರಾಮಪ್ಪ ಕೋಲ್ಕಾರ ಲಕ್ಷ್ಮಣ ರಾಮಪ್ಪ ಮಲ್ಲಾರ ಮತ್ತು ಕಂದಾಯ ನಿರೀಕ್ಷಕರಾದ ಎಂ.ಕೆ. ಮಲ್ಕನ್ನವರ ಮತ್ತು ಉಪ ತಹಶೀಲ್ದರಾದ ಆರ್ ಆರ್ ಕುಲಕರ್ಣಿ ಮಗುವನ್ನು ಹುಡುಕಿ ಅವರ ತಂದೆಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.




