——————————————–ವಿಜಯ ಹಜಾರೆ ದೇಶಿಯ ಕ್ರಿಕೆಟ್
ಅಹ್ಮದಾಬಾದ್: ದೇಶಿಯ ಕ್ರಿಕೆಟ್ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ‘ಎ’ ಗುಂಪಿನ ಪಂದ್ಯದಲ್ಲಿ ರ್ನಾಟಕ ತಂಡವು ತಮಿಳುನಾಡು ವಿರುದ್ಧ ಇಂದು ಕಣಕ್ಕೆ ಇಳಿದಿದ್ದು, ಮೊದಲು ಬ್ಯಾಟ್ ಮಾಡಿದ ತಮಿಳು ನಾಡು ೨೮೮ ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದ್ದು, ಗೆಲ್ಲಲು ರ್ನಾಟಕಕ್ಕೆ ೨೮೯ ರನ್ ಗಳನ್ನು ಗಳಿಸಬೇಕಿದೆ.
ಗುಜರಾತ್ ಕಾಲೇಜು ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ತಮಿಳುನಾಡು ತಂಡ ೪೯.೫ ಓವರುಗಳಲ್ಲಿ ೨೮೮ ರನ್ ಗಳಿಗೆ ಆಲೌಟ್ ಆಗಿದೆ. ಕರ್ನಾಟಕದ ಪರವಾಗಿ ಅಭಿಲಾಷ್ ಶೆಟ್ಟಿ ೫೭ ಕ್ಕೆ ೪ ವಿಕೆಟ್ ಪಡೆದರು.
ಸ್ಕೋರ್ ವಿವರ
ತಮಿಳುನಾಡು ೪೯.೫ ಓವರುಗಳಲ್ಲಿ ೨೮೮
ಎನ್. ಜಗದೀಶನ್ ೬೫ ( ೬೭ ಎಸೆತ, ೧೦ ಬೌಂಡರಿ, ೧ ಸಿಕ್ಸರ್)
ಪ್ರದೋಶ್ ರಂಜನ್ ಪೌಲ್ ೫೭ (೬೪ ಎಸೆತ, ೫ ಬೌಂಡರಿ)
ಅಭಿಲಾಷ್ ಶೆಟ್ಟಿ ೫೭ ಕ್ಕೆ ೪, ಶ್ರೀಶ್ ಆಚರ್ ೪೭ ಕ್ಕೆ೨, ವಿದ್ಯಾಧರ ಪಾಟೀಲ್ ೬೨ ಕ್ಕೆ ೨)
ಕರ್ನಾಟಕಕ್ಕೆ ೨೮೯ ರನ್ಗಳ ಗೆಲುವಿನ ಗುರಿ




