ಮುಂಬೈ: ಎಡಗೈ ಬ್ಯಾಟರ್ ನಿತೀಶ ರಾಣಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಸ್ತಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 11 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ 183 ರನ್ ಗಳ ಗೆಲುವಿನ ಗುರಿ ನೀಡಿತು.
ಮೊದಲು ಬ್ಯಾಟ್ ಮಾಡಿದ ರಾಯಸ್ತಾನ ರಾಯಲ್ಸ್ ಪರವಾಗಿ ನಿತೀಶ ರಾಣಾ ಅವರು ಇಂದು ಅಕ್ಷರಸ ರನ್ ಸುರಿಮಳೆ ಗೈದರು. ಕೇವಲ 36 ಎಸೆತಗಳಲ್ಲಿ 10 ಬೌಂಡರಿ 5 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು.
ನಾಯಕ ರಿಯಾನ್ ಪರಾಗ್ 27 ಎಸೆಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಚೆನ್ನೈ ಪರ ನೂರ ಅಹ್ಮದ 28 ಕ್ಕೆ 2 ವಿಕೆಟ್ ಕಬಳಿಸಿದರು.