Ad imageAd image

ತಾ.ಪಂ ವತಿಯಿಂದ ಅನಕ್ಷರರಸ್ಥ ಗ್ರಾ.ಪಂ ಸದಸ್ಯರಿಗೆ ಅಕ್ಷರದ ಅರಿವು ಮೂಡಿಸಲು ಸಿದ್ಧವಾಯ್ತು ಆಯ್ದ ಬೋಧಕರ ತಂಡ

Bharath Vaibhav
ತಾ.ಪಂ ವತಿಯಿಂದ ಅನಕ್ಷರರಸ್ಥ ಗ್ರಾ.ಪಂ ಸದಸ್ಯರಿಗೆ ಅಕ್ಷರದ ಅರಿವು ಮೂಡಿಸಲು ಸಿದ್ಧವಾಯ್ತು ಆಯ್ದ ಬೋಧಕರ ತಂಡ
WhatsApp Group Join Now
Telegram Group Join Now

ಬೆಳಗಾವಿ :-ಜಿಲ್ಲಾ ಪಂಚಾಯಿತಿ ವತಿಯಿಂದ ಬೆಳಗಾವಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಅನಕ್ಷರಸ್ಥ ಗ್ರಾ.ಪಂ ಸದಸ್ಯರಿಗೆ ಅಕ್ಷರದ ಅರಿವು ಮೂಡಿಸಲು ಆಯ್ದ ಬೋಧಕ ತರಬೇತುದಾರರಿಗೆ ತರಬೇತಿ

ಕೊಡಲು ಬೆಳಗಾವಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ,ಆಯ್ದ ತರಬೇತು ದಾರರಾದ ಶ್ರೀ ರಾಜಶೇಖರ್ ನೇಗಿನಹಾಳ, ಸುರೇಶ್ ಸಕ್ರೆಣ್ಣ ನವರ್ ನೇತೃತ್ವದಲ್ಲಿ 3 ದಿನಗಳ ತರಬೇತಿಯ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ತರಬೇತಿ ಪಡೆಯುವ ಬೋಧಕ ವರ್ಗಕ್ಕೆ ರಮೇಶ್ ಹೇಡಿಗೆಯವರು ಮಾರ್ಗದರ್ಶನ ನೀಡಿ ಅವರಿಗೆ ತರಬೇತಿಯ ಕಿಟ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಈ ತರಬೇತಿಯ ಮುಖ್ಯ ಟ್ರೈನರ್ ಕುಸುಮಾ ಹವಕ್ಕ ನವರ್ ಹಾಗೂ ನೇತ್ರಾವತಿ ರಜಪೂತ ಸೇರಿದಂತೆ ಎಲ್ಲಾ ಬೋಧಕರು ಈ ಬಗ್ಗೆ ಮಾಹಿತಿ ನೀಡಿದರು.

 ವರದಿ:- ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!