Ad imageAd image

ಮಲತಾಯಿ ಕ್ರೌರ್ಯಕ್ಕೆ ಮೂರು ವರ್ಷದ ಮಗು ಬಲಿ

Bharath Vaibhav
CRIME
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮಲತಾಯಿಯೊಬ್ಬಳ ಕ್ರೌರ್ಯಕ್ಕೆ ಮೂರು ವರ್ಷದ ಮಗು ಬಲಿಯಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಂಗ್ರಾಳಿ ಗ್ರಾಮದಲ್ಲಿ ಮಲತಾಯಿ ಹೊಡೆದು ಕೊಂದಿರುವ ಘಟನೆ ನಡೆದಿದೆ. ಗ್ರಾಮದ ಸಿಆರ್‌ ಪಿಎಫ್‌ ಯೋಧ ರಾಯಣ್ಣನ ಮಗಳನ್ನ ರಾಯಣ್ಣನ ಎರಡನೇ ಹೆಂಡತಿ ಸಪ್ನಾ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಿಆರ್‌ ಪಿಎಫ್‌ ಯೋಧ ರಾಯಣ್ಣನ ಮೊದಲ ಹೆಂಡತಿ ತೀರಿಕೊಂಡ ಬಳಿಕ ಸಪ್ನಾ ಅವರನ್ನು ಎರಡನೇ ಮದುವೆ ಆಗಿದ್ದರು. ಎರಡನೇ ಹೆಂಡತಿ ಸಪ್ನಾ ಮೊದಲ ಹೆಂಡತಿಯ ಮೂರು ವರ್ಷದ ಮಗಳನ್ನು ಹೊಡೆದು ಕೊಲೆ ಮಾಡಿದ್ದು, ಬಳಿಕ ವಾಂತಿ ಮಾಡಿಕೊಂಡು ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾಳೆ ಎಂದು ಮಗುವಿನ ಚಿಕ್ಕಪ್ಪ, ಅಜ್ಜಿ ಆರೋಪ ಮಾಡಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!