ಚಂದಿಗಢ: ಲೆಗ್ ಸ್ಪಿನ್ನರ್ ಯಝುವೇಂದ್ರ ಚಹಲ್ ಅವರ ಮಾಂತ್ರಿಕ ಬೌಲಿಂಗ್ ( 28 ಕ್ಕೆ 4) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಪಂದ್ಯಾವಳಿಯ 31 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 16 ರನ್ ಗಳ ರೋಚಕ ಜಯ ಪಡೆಯಲು ಸಾಧ್ಯವಾಯಿತು.
ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 15.3 ಓವರುಗಳಲ್ಲಿ ಕೇವಲ 111 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಸಣ್ಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15.1 ಓವರುಗಳಲ್ಲಿ 95 ರನ್ ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ 8 ಅಂಕಗಳನ್ನು ಸಂಪಾದಿಸಿದ ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ರನ್ ಸರಾಸರಿ ಆಧಾರದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು. ಲಕ್ನೋ ಸೂಪರ್ ಗೇಂಟ್ಸ್ 5 ಹಾಗೂ ಕೆಕೆಆರ್ 6 ನೇ ಸ್ಥಾನದಲ್ಲಿವೆ.
ಸ್ಕೋರ್ ವಿವರ:
ಪಂಜಾಬ್ ಕಿಂಗ್ಸ್ 15.3 ಓವರುಗಳಲ್ಲಿ 111
ಪ್ರಿಯಾನ್ಸ್ ಆರ್ಯ 22 ( 12 ಎಸೆತ, 3 ಬೌಂಡರಿ, 1 ಸಿಕ್ಸರ್), ಪ್ರಬಸಿಮ್ರನ್ 30 ( 15 ಎಸೆತ, 2 ಬೌಂಡರಿ, 3 ಸಿಕ್ಸರ್)
ಶಂಶಾಂಕ ಸಿಂಗ್ 18 ( 17 ಎಸೆತ, 1 ಬೌಂಡರಿ, 1 ಸಿಕ್ಸರ್) ಹರ್ಷಿತ್ ರಾಣಾ 25 ಕ್ಕೆ 3,
ಕೋಲ್ಕತ್ತಾ ನೈಟ್ ರೈಡರ್ಸ್ 15.1 ಓವರುಗಳಲ್ಲಿ 95
ಅಂಕ್ರಿಶ್ ರಘುವಂಶಿ 37 ( 28 ಎಸೆತ, 5 ಬೌಂಡರಿ, 1 ಸಿಕ್ಸರ್), ಚಹಲ್ 28 ಕ್ಕೆ 4, ಮಾರ್ಕೋ ಜಾನ್ಸನ್ 17 ಕ್ಕೆ 3)
–ಪಂದ್ಯ ಶ್ರೇಷ್ಠ: ಯಝುವೇಂದ್ರ ಚಹಲ್