ಬೆಳಗಾವಿ :– ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳು ಸೇರಿ ಒಟ್ಟು 11,117 ಹಾಗೂ ಆದ್ಯತೇತರ ಪಡಿತರ ಚೀಟಿಗಳು 1,421 ಹೀಗೆ ಒಟ್ಟು 12,538 ಮೃತ ಫಲಾನುಭವಿಗಳಿದ್ದು, ಅವುಗಳ ವಿವರವನ್ನು ಕುಟುಂಬ ದತ್ತಾಂಶದಿಂದ ಪಡೆದು ರದ್ದುಗೊಳಿಸಲಾಗಿದೆ.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಅಂತ್ಯೋದಯ 447, ಆದ್ಯತಾ ಪಡಿತರ ಚೀಟಿಗಳು 19412 ಒಟ್ಟು 19,969 ಪಡಿತರ ಚೀಟಿದಾರರು ಕಳೆದ 6 ತಿಂಗಳು (ನವೆಂಬರ್ – 2023 ) ರಿಂದ (ಏಪ್ರೀಲ್-2024 ) ವರೆಗೆ ಪಡಿತರವನ್ನು ಇಲಾಖೆಯ ನ್ಯಾಯ ಬೆಲೆ ಅಂಗಡಿಗಳಿಂದ ಪಡೆಯದೇ ಇದ್ದುದರಿಂದ ಆ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ.
ಕಳೆದ ಜುಲೈ. 26 ರಂದು ಸರ್ಕಾರದ ಅಪರ ಕಾರ್ಯದರ್ಶಿ, ಹಣಕಾಸು ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಿದಂತೆ ಇಲಖೆಯ ದತ್ತಾಂಶದಿಂದ ಪಡರಿತರ ಚೀಟಿಗಳ್ನು ಅಮಾನತ್ತುಗೊಳಿಸಿಸಲಾಗಿದೆ.
ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರರು ಹಾಗೂ ಅನರ್ಹರು ಹೊಂದಿರುವ ಒಟ್ಟು 45,804 ಆದ್ಯತಾ ಪಡಿತರ ಚೀಟಿಗಳು ಆದ್ಯತೇತರ ಪಡಿತರ ಚೀಟಿಗಳಾಗಿ ಪರಿವರ್ತಿಸುವುದರೊಂದಿಗೆ ನೌಕರರಿಂದ, ಅನರ್ಹ ಪಡಿತರ ಚೀಟಿದಾರರಿಂದ ಸರ್ಕಾರದ ಲೆಕ್ಕಶೀರ್ಷಿಕೆಗೆ ಒಟ್ಟು ರೂ. 1,88,75,946 ರೂ. ಹಣವನ್ನು ದಂಡದ ರೂಪದಲ್ಲಿ ಪಡೆದುಕೊಳ್ಳಲಾಗಿದೆ.
ವರದಿ :-ರಾಜು ಮುಂಡೆ