ಪಾವಗಡ: ಜಿಲ್ಲಾ ಪಂಚಾಯಿತಿ ತುಮಕೂರು, ಗ್ರಾ.ಕು.ನೀ&ನೈ ವಿಭಾಗ ತುಮಕೂರು, ಗ್ರಾ.ಕುನೀ&ನೈ ಉಪ ವಿಭಾಗ ಪಾವಗಡ, ತಾಲ್ಲೂಕು ಪಂಚಾಯಿತಿ ಪಾವಗಡ , CURDS ಸಂಸ್ಥೆ ರವರ ಸಹಯೋಗದಲ್ಲಿ ಪಾವಗಡ ತಾಲ್ಲೂಕು ಪಂಚಾಯತಿಯ ಸಭಾಂಗಣದಲ್ಲಿ – ನಾಗಲಮಡಿಕೆ ಹೋಬಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ* ವ್ಯಾಪ್ತಿಯ ನೀರು ವಿತರಕರಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ವಿತರಕರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ತಾಲ್ಲೂಕು ಕಿರಿಯ ಇಂಜಿನಿಯರ್ ಗಳಾದ ಬಸವಲಿಂಗಪ್ಪ ರವರು ಮಾತನಾಡಿ ಕಾಮಗಾರಿ ನಡೆಯುವಾಗ ನೀರು ವಿತರಕರ ಪಾತ್ರ, ಮೇಲ್ವಿಚಾರಣೆ ಅತ್ಯಗತ್ಯ, ಕಾಮಾಗಾರಿ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ನೀಡಿ, ಇಂದಿನ ತರಬೇತಿಯಲ್ಲಿ ತಿಳಿಸುವ ತಾಂತ್ರಿಕ ಮಾಹಿತಿಗಳನ್ನು ಕಲಿತುಕೊಳ್ಳಬೇಕು , ನಾಳೆ ಪೈಪ್ ಲೈನ್ ರಿಪೇರಿ ಕೆಲಸ, ಹೊಸ ನೆಲ್ಲಿ ಅಳವಡಿಸುವ ಕೆಲಸ ನೀವೆ ನಿರ್ವಹಿಸಬೇಕಾಗಿದೆ, ಮಿಷಿನ್ ಗಳನ್ನು ನಿರ್ವಹಿಸುವ ಬಗ್ಗೆ ಉತ್ತಮ ತರಬೇತಿ ಇದು ಎಂದು ಹೇಳಿದರು.
ಕಾಮಗಾರಿ ಅನುಷ್ಟಾನದಲ್ಲಿ ನೀರು ವಿತರಕರ ಪಾತ್ರ, ಜವಾಬ್ದಾರಿ, ಸಹಭಾಗಿತ್ವದ ಬಗ್ಗೆ , HDPE ಗುಣಮಟ್ಟದ ಬಗ್ಗೆ ತಿಳಿಸಿದರು ತರಬೇತಿ ಉದ್ದೇಶ, ಅನುಕೂಲತೆ ಬಗ್ಗೆ ತಿಳಿಸಿದರು, DPR ನಂತೆ ಕಾಮಾಗಾರಿಗಳನ್ನು ಪೂರ್ಣಗೊಳಿಸಬೇಕು ಆ ಸಂಧರ್ಭದಲ್ಲಿ ನಿಮ್ಮ ಪಾತ್ರ ತುಂಬಾ ಮುಖ್ಯ ಎಂದರು . ನಂತರ ಸಂಪನ್ಮೂಲ ವ್ಶಕ್ತಿಗಳಾದ ರಾಜ್ ರವರು ರವರು ಮಾತನಾಡುತ್ತ ಯೋಜನೆಯ ಘಟಕಾಂಶಗಳ ಬಗ್ಗೆ ,ತರಬೇತಿ ಉಪಯೋಗಗಳ ಬಗ್ಗೆ ತಿಳಿಸಿದರು. ಹಾಗೂ ISA ಸಿಬ್ಬಂದಿ ತಂಡದ ಮಾರುತಿಕುಮಾರ್ ರವರು ಭಾಗವಹಿಸಿದ್ದರು , ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು .
ವರದಿ:ಶಿವಾನಂದ




