ಸಿರುಗುಪ್ಪ : ನಗರದ ಕೃಷಿ ಸಂಶೋದನಾ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ವತಿಯಿಂದ 2025ನೇ ಸಾಲಿನ ಜಿಲ್ಲಾ ಪಂಚಾಯಿತಿ ವಿಸ್ತರಣಾ ಚಟುವಟಿಕೆಗಳ ಕಾರ್ಯಕ್ರಮದಡಿ ತಾಲೂಕಿನ ರೈತರಿಗೆ ಆಧುನಿಕ ಪಶುಪಾಲನಾ ಪದ್ದತಿಗಳ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಂಜುನಾಥ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಹೈನುಗಾರಿಕೆಯನ್ನು ಹಮ್ಮಿಕೊಳ್ಳುವ ಮುನ್ನ ಅವುಗಳ ಸಾಧಕ ಬಾಧಕಗಳನ್ನು ಮೊದಲೇ ಅರಿತಿರಬೇಕು. ಉತ್ತಮ ಆರೋಗ್ಯಕ್ಕಾಗಿ ಉತ್ತಮ ಮಾಂಸ ಮತ್ತು ಮೊಟ್ಟೆಗಳು ದೊರೆಯುವ ಕೋಳಿಗಳ ಬಗ್ಗೆ ಅರಿವು ಅಗತ್ಯವೆಂದರು.
ತರಬೇತಿ ಕಾರ್ಯಗಾರವನ್ನುದ್ದೇಶಿ ಮಾತನಾಡಿದ ಜಿಲ್ಲಾ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಸವರಾಜ್ ಸರ್ಜನ್ ಅವರು ಲಾಲನೆ, ಪಾಲನೆ, ರೋಗಗಳ ಕುರಿತು ನುರಿತ ವೈದ್ಯರ ಸಲಹೆ ಹಾಗೂ ಪ್ರಗತಿಪರ ರೈತರ ಅನುಭವಗಳನ್ನು ಪಡೆದುಕೊಳ್ಳಬೇಕು.
ಪಶು ಸಂಗೋಪನೆ ಮತ್ತು ಹೈನುಗಾರಿಕೆಯ ಭಾಗಗಳಾದ ಹಸು, ಎಮ್ಮೆ, ಕೋಳಿ, ಹಂದಿ, ಮೇಕೆ, ಕುರಿಗಳ ತಳಿಗಳ ಹೈನುಗಾರಿಕೆ ತಳಿಗಳು, ಉಳುಮೆ ತಳಿಗಳು ಮತ್ತು ಉಭಯ ತಳಿಗಳ ಮಹತ್ವ ಸ್ವದೇಶಿ ಮತ್ತು ವಿದೇಶಿ ತಳಿಗಳಿಂದಾಗುವ ಲಾಭಗಳ ಬಗ್ಗೆ ವಿವರಣೆ ನೀಡಿದರು.
ಇದೇ ವೇಳೆ ಪಶು ವೈದ್ಯಾಧಿಕಾರಿ ಡಾ.ಗಂಗಾಧರ ಹಾಗೂ ಪಶು ಆಸ್ಪತ್ರೆಯ ಸಿಬ್ಬಂದಿಗಳು, ಪಶು ಸಖಿಯರು, ಪ್ರಗತಿಪರ ರೈತರು ಹಾಗೂ ರೈತ ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ