Ad imageAd image

ಕೃಷಿ ಕುಟುಂಬ ಹಾಗೂ ಬಡತನದಲ್ಲಿ ಅರಳಿದ ಪ್ರತಿಭೆಗಳಿಗೆ ಪುರಸ್ಕಾರ

Bharath Vaibhav
ಕೃಷಿ ಕುಟುಂಬ ಹಾಗೂ ಬಡತನದಲ್ಲಿ ಅರಳಿದ ಪ್ರತಿಭೆಗಳಿಗೆ ಪುರಸ್ಕಾರ
WhatsApp Group Join Now
Telegram Group Join Now

ಸಿರುಗುಪ್ಪ : -ತಾಲೂಕಿನ ಗಡಿಭಾಗದಲ್ಲಿರುವ ಹಚ್ಚೊಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 2023-24ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ದ್ವಿತಿಯ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಂದ ಸನ್ಮಾನಿಸಲಾಯಿತು.

ಪ್ರಭಾರಿ ಪ್ರಾಂಶುಪಾಲರಾದ ಮಹೇಶ್ ಕುಮಾರ್.ಡಿ, ಅವರು ಮಾತನಾಡಿ ಕೃಷಿ ಕುಟುಂಬದ ವಿದ್ಯಾರ್ಥಿ ಕುಮಾರಿ ಗಂಗಮ್ಮ 579 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದು, 568 ಅಂಕಗಳಿಂದ ಸಾನಿಯಾ.ಎಮ್, ದ್ವಿತಿಯ ಸ್ಥಾನದಲ್ಲಿದ್ದಾರೆ.

ಪ್ರಸಕ್ತ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 55, ವಾಣಿಜ್ಯ ವಿಭಾಗದಲ್ಲಿ 9 ಸೇರಿ ಒಟ್ಟು 64 ವಿದ್ಯಾರ್ಥಿಗಳು ಹಾಜರಾಗಿದ್ದು, 56 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಅದರಲ್ಲಿ 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದು ಕಾಲೇಜಿಗೆ ಶೇಕಡ 88 ಫಲಿತಾಂಶ ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಪೋಷಕರ ಸಹಕಾರ ಹಾಗೂ ಉಪನ್ಯಾಸಕ ವರ್ಗದ ಭೋದನೆಯಿಂದ ಉತ್ತಮ ಅಂಕಗಳನ್ನು ಗಳಿಸಿ ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಖಾಸಗಿ ಕಾಲೇಜುಗಳಲ್ಲೂ ಬಾರದ ಫಲಿತಾಂಶ ಇಲ್ಲಿ ಬಂದಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದರು.

ವಿದ್ಯಾರ್ಥಿನಿಯರಾದ ಕುಮಾರಿ ಗಂಗಮ್ಮ ಹಾಗೂ ಸಾನಿಯಾ.ಎಮ್. ಮಾತನಾಡಿ ಬಡತನವೇ ನಾವು ಹೆಚ್ಚಿನ ಅಂಕಗಳನ್ನು ಪಡೆಯಲು ಸ್ಪೂರ್ತಿಯಾಗಿದ್ದು, ಉತ್ತಮ ಭೋಧನೆಯಿಂದ, ಪೋಷಕರ ಸಹಕಾರದಿಂದ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗಿದೆಂದರು.

ಇದೇ ವೇಳೆ ಉಪನ್ಯಾಸಕರಾದ ಬಸವರಾಜ, ಸತೀಶ್, ಮಲ್ಲಿಕಾರ್ಜುನ, ಅಮರೇಶ, ವೀರನಗೌಡ, ನಂದಿನಿ ಉಪಸ್ಥಿತರಿದ್ದರು.

ವರದಿ.ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!