ಸಿಂಧನೂರು : ಜುಲೈ 30, ಧರ್ಮಸ್ಥಳದ ವ್ಯಾಪ್ತಿಯಲ್ಲಿ ನೂರಾರು ಮಹಿಳೆಯರ ಕೊಲೆ ಅತ್ಯಾಚಾರ ಹಾಗೂ ಅಸಹಜ ಸಾವುಗಳ ನಿಷ್ಪಕ್ಷಪಾತ ತನಿಖೆ ಹಾಗೂ ತಪ್ಪಿಸ್ಥರನ್ನು ಶಿಕ್ಷಿಸಲು ಒತ್ತಾಯಿಸಿ ಮಾನ್ಯ ತಹಸಿಲ್ದಾರರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಧಾರ್ಮಿಕ ಕ್ಷೇತ್ರ ಎಂದು ಹೆಸರಾದ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನೂರಾರು ಮಹಿಳೆಯರ ಕೊನೆ ಅತ್ಯಾಚಾರ ಹಾಗೂ ಅಸಹಜ ಸಾವುಗಳಂತಹ ಪೈಶಾಚಿಕ ಕೃತ್ಯಗಳು ನಡೆದಿರುವುದು ಅತ್ಯಂತ ಆಘಾತಕಾರಿಯಾಗಿದ್ದು ಯಾವುದೇ ಪ್ರಭಾವ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಯಾರ ಪ್ರಭಾವ ಒತ್ತಡಕ್ಕೆ ಮಣಿಯದೆ ಎಸ್ಐಟಿ ಮೂಲಕ ತನಿಖೆ ಕೈಗೊಂಡು ತಪ್ಪಿಸ್ಥರನ್ನು ಪತ್ತೆ ಹಚ್ಚಿ ಬಂಧಿಸಿ ಕೊಲೆಗೀಡಾದ ಕುಟುಂಬದವರಿಗೆ ನ್ಯಾಯ ಒದಗಿಸಬೇಕೆಂದು ಪ್ರಗತಿಪರ ಸಂಘಟನೆ ಒಕ್ಕೂಟ ತಮ್ಮಲ್ಲಿ
ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ – ಬಸವಂತಾಯ ಗೌಡ. ಡಿಹೆಚ್. ಕಂಬಳಿ. ಬಿ ಎನ್. ಯಾರದಿಹಾಳ. ಚಿಟ್ಟಿಬಾಬು. ರಮೇಶ್ ಪಾಟೀಲ್ ಬೇರ್ಗಿ. ಬಸವರಾಜ ಬಾದರ್ಲಿ. ಭಾನು ಬೇಗಂ. ಸುಲೋಚನ. ಸರಸ್ವತಿ. ಲಕ್ಷ್ಮಿ ಪತ್ತಾರ್. ಇನ್ನು ಅನೇಕರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.




