ಬಾಗಲಕೋಟೆ: ಇಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಅವರ ವಾಹನ ಕೆಟ್ಟುನಿಂತು ಭಾರೀ ಮುಖಭಂಗವಾಗಿದೆ.
ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಪರೇಡ್ ವೀಕ್ಷಣೆಗೆ ಆಗಮಿಸಿದ್ದು, ಆಗ ಅಡಚಣೆ ಉಂಟಾಗಿದೆ.
ಪರೆಡ್ ವೀಕ್ಷಣೆಗೆ ತೆರಳಬೇಕಿದ್ದ ತೆರೆದ ವಾಹನದಲ್ಲಿ ಕೆಲಕ್ಷಣ ತಾಂತ್ರಿಕ ದೋಷ ಉಂಟಾಗಿದೆ. ನಂತರ ಎರಡು ನಿಮಿಷಗಳ ಸತತ ಪ್ರಯತ್ನದ ಬಳಿಕ ವಾಹನ ಸ್ಟಾರ್ಟ್ ಆಗಿದೆ.




