ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ರಾಜಸ್ಥಾನ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿದ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಬಾರಿಸಿತು. ತಂಡದ ಪರ ಇಶಾನ್ ಕಿಶನ್ ಶತಕ ಸಿಡಿಸಿದರು. ಹೈದರಾಬಾದ್ ನೀಡಿದ್ದ ಈ ಬೃಹತ್ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ಕೊನೆವರೆಗೂ ಹೋರಾಡಿ ಅಂತಿಮವಾಗಿ 44 ರನ್ಗಳಿಂದ ಸೋಲನುಭವಿಸಿತು.
ಆದರೆ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ಜೋಫ್ರಾ ಆರ್ಚರ್ ಅತ್ಯಂತ ಕೆಟ್ಟ ದಾಖಲೆಯನ್ನು ಬರೆದಿದ್ದಾರೆ. ಅವರು ಬೌಲಿಂಗ್ ಮಾಡಿದ ನಾಲ್ಕು ಓವರ್‌ಗಳಲ್ಲಿ ಬರೋಬ್ಬರಿ 76 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಯಾವುದೇ ಬೌಲರ್ ಇಷ್ಟೊಂದು ರನ್ ಬಿಟ್ಟುಕೊಟ್ಟಿಲ್ಲ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಅವರನ್ನು ₹12.50 ಕೋಟಿಗೆ ರೂ.ಗೆ ಖರೀದಿಸಿತು. ಆದರೆ ಮೊದಲ ಪಂದ್ಯದಲ್ಲೇ ಅವರು ತಂಡವನ್ನು ತೀವ್ರ ನಿರಾಸೆಗೊಳಿಸಿದರು. 76 ರನ್ ಬಿಟ್ಟುಕೊಟ್ಟರೂ ಒಂದೇ ಒಂದು ವಿಕೆಟ್ ಕೂಡ ಪಡೆಯಲಿಲ್ಲ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಇವರ ಬೌಲಿಂಗ್ನಲ್ಲಿ ಸುಲಭವಾಗಿ ಬೌಂಡರಿಗಳನ್ನು ಬಾರಿಸಿದರು. ಈ ಹಿಂದೆ 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್‌ಗಳಲ್ಲಿ 73 ರನ್‌ಗಳನ್ನು ನೀಡಿದ್ದ ಮೋಹಿತ್ ಶರ್ಮಾ ಅವರನ್ನು ಜೋಫ್ರಾ ಆರ್ಚರ್ ಇದೀಗ ಹಿಂದಿಕ್ಕಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ಸ್!
ಜೋಫ್ರಾ ಆರ್ಚರ್ 76 (2025) ಮೋಹಿತ್ ಶರ್ಮಾ 73
ಬಾಸಿಲ್ ಥಂಪಿ 70 ಯಶ್ ದಯಾಳ್ 69
ರೀಸ್ ಟೋಪ್ಲಿ 68