Ad imageAd image

ಭಾರತದ ಗಡಿಭಾಗದಲ್ಲಿ ಸುಮಾರು 26 ವರ್ಷಗಳಿಂದ ಸೇವೆ ತುರ್ತು ಸೇವೆಗೆ ಬಿಳ್ಕೊಡುಗೆ

Bharath Vaibhav
ಭಾರತದ ಗಡಿಭಾಗದಲ್ಲಿ ಸುಮಾರು 26 ವರ್ಷಗಳಿಂದ ಸೇವೆ ತುರ್ತು ಸೇವೆಗೆ ಬಿಳ್ಕೊಡುಗೆ
WhatsApp Group Join Now
Telegram Group Join Now

ಅರಸೀಕೆರೆ: ತಾಲ್ಲೋಕಿನ ಹಾರನಹಳ್ಳಿ ಗ್ರಾಮದ ಸೈನಿಕ ಡಾಕ್ಟರ್ ಪರಮೇಶ್ ರವರಿಗೆ ಭಾರತದ ಗಡಿಭದ್ರತಾ ಪಡೆಯಿಂದ ತುರ್ತು ಸಂದೇಶದ ಹಿನ್ನೆಲೆಯಲ್ಲಿ ಇಂದು ಶ್ರೀ ನಗರ ಕ್ಕೆ ಸೋಮವಾರ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ ನಮ್ಮ ನಾಡು ನಮ್ಮ ದೇಶದ ಗೌರವ ಸಾಧಿಸಲು ನಾನು ಕರೆಗೆ ಸ್ಪಂದಿಸಿ ಹೋರಟಿದ್ದೆನೆ. ನನಗೆ ನನ್ನ ದೇಶ ಮುಖ್ಯ ಎಂದು ಭಾರತ್ ಮಾತಾ ಕೀ ಜೈ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೋಕು ಜೆಡಿಎಸ್ ಮುಖಂಡ ಎನ್, ಆರ್, ಸಂತೋಷ್ ರವರು ಗಡಿಭದ್ರತೆಗೆ ತೆರಳುತ್ತೀರುವ ಯೋದ ಪರಮೇಶ್.  ರವರಿಗೆ ಹಣೆಗೆ ತಿಲಕ ಇಡುವುದರ ಮೂಲಕ ಸನ್ಮಾನಿಸಿ ಗೌರವಿಸಿ ಬಿಳ್ಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಎನ್,ಆರ್, ಸಂತೋಷ್ ನಮ್ಮ ದೇಶಕ್ಕಾಗಿ ಸಾವಿರಾರು ಜನ ಹುತಾತ್ಮರಾಗಿ ವೀರ ಸ್ವರ್ಗ

ಸೇರಿದ್ದಾರೆ. ಆದರೆ ಪರಮೇಶ್ ಈ ಹೋರಾಟ ದಲ್ಲಿ ಗೆಲುವು ಸಾಧಿಸಿ ಮತ್ತೆ ತಮ್ಮ ಜನ್ಮ ಭೊಮಿಗೆ ವಾಪಸ್ ಬರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಡಿ.ಎಂ.ಕುರ್ಕೆಜಯದೆವ್,ಕಾಟೀಕೆರೆ ಮೋಹನ್ ಕುಮಾರ್ ,ಮಾಜಿ ನಗರಸಭಾ ಸದಸ್ಯ ಹರ್ಷವರ್ಧನ,,ಬಕ್ಕಪ್ಪ ಶಿವು,ವಕೀಲ ಶಿವರಾಜ್,ಸುನೀಲ್ ಯೋದ ಪರಮೇಶ್ ರವರ ಹೆಂಡತಿ ರೋಪ, ಮಕ್ಕಳಾದ ಪುನೀತ್ ವಿಶ್ವಕರ್ಮ, ದೀಪಿಕಾ ವಿಶ್ವಕರ್ಮ, ಇತರರು ಹಾಜರಿದ್ದರು.

ವರದಿ: ರಾಜು ಅರಸಿಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!