ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಪತ್ನಿ ಕಿರುಕುಳ ಪ್ರಕರಣ ಬಯಲಿಗೆ ಬಂದಿದ್ದು, ಈ ಬಾರಿ ಪತ್ನಿಯ ವಿಚಿತ್ರ ಬೇಡಿಕೆಗಳಿಗೆ ಬೇಸತ್ತ ಟೆಕ್ಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು.. ಬೆಂಗಳೂರು ಮೂಲದ ಟೆಕ್ಕಿ (Bengaluru Techie) ಶ್ರೀಕಾಂತ್ ಎಂಬುವವರು ತನ್ನ ಪತ್ನಿ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದು, ತನಗೆ ನ್ಯಾಯಕೊಡಿಸಿ ಎಂದು ಪೊಲೀಸರ ಬಳಿ ಅಂಗಲಾಚಿದ್ದಾರೆ. ಒಪ್ಪಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಪತ್ನಿ ಗಂಡನೊಂದಿಗೆ ಸಂಸಾರ ಮಾಡಲು ದಿನವೊಂದಕ್ಕೆ 5,000 ರೂ. ಬೇಡಿಕೆಯಿಡುವುದರ ಜೊತೆಗೆ ಬ್ಯೂಟಿ ಹಾಳಾಗುತ್ತೆ ಸ್ವಂತ ಮಕ್ಕಳು ಬೇಡ..
ದತ್ತು ಮಕ್ಕಳನ್ನ ಪಡೆದುಕೊಳ್ಳೊಣ ಎಂದು ಗಂಡನಿಗೆ, ಪತ್ನಿ ಕಿರುಕುಳ (Wife Tortur) ಕೊಡುತ್ತಿದ್ದಾರೆಂದು ಆರೋಪಿಸಿ ಪತಿ ಶ್ರೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಟೆಕ್ಕಿ ಶ್ರೀಕಾಂತ್ ಹಾಗೂ ಬಿಂದುಶ್ರೀ 2022 ರಲ್ಲಿ ಕುಟುಂಬಸ್ಥರ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಆಗಿದ್ದರು. ಆದರೆ ಮದುವೆಯಾದ ಮೇಲೆ ಟೆಕ್ಕಿ ಶ್ರೀಕಾಂತ್ ಒಂದೇ ಒಂದು ದಿನವೂ ಪತ್ನಿಯೊಂದಿಗೆ ಸಂಸಾರ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮಂಚ ಹತ್ತೋಕೆ 5 ಸಾವಿರ ಹಣ: ಶ್ರೀಕಾಂತ್ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಸಾಂಸಾರಿಕ ಜೀವನದ ವಿಚಾರದಲ್ಲಿ ಪತ್ನಿ ಎಂದಿಗೂ ಸಹಕರಿಸುತ್ತಿಲ್ಲ. ಮಂಚ ಹತ್ತಲು 5 ಸಾವಿರ ರೂ ಹಣಕೇಳುತ್ತಾಳೆ. ಮುಟ್ಟಲು ಹೋದರೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಬ್ಲಾಕ್ ಮೇಲ್ ಮಾಡುತ್ತಾಳೆ ಪತಿ ಆರೋಪಿಸಿದ್ದಾರೆ. ಅಲ್ಲದೆ ಮಕ್ಕಳು ಮಾಡಿಕೊಳ್ಳೊಣ ಅಂತ ಗಂಡ ಶ್ರೀಕಾಂತ್ ಕೇಳಿದರೆ ಈಗ ಮಕ್ಕಳು ಬೇಡ. ನನ್ನ ಬ್ಯೂಟಿ ಹಾಳಾಗುತ್ತೆ. ನಮಗೆ 60 ವರ್ಷವಾದ ಬಳಿಕ ಮಕ್ಕಳು ಮಾಡಿಕೊಳ್ಳೊಣ ಎನ್ನುತ್ತಾಳೆ.
ವಿಚ್ಚೇದನಕ್ಕೆ ಒತ್ತಡ, 45 ಲಕ್ಷಕ್ಕೆ ಪತ್ನಿ ಡಿಮಾಂಡ್: ಇನ್ನು ಪತ್ನಿ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ದು, 45 ಲಕ್ಷ ರೂ ಜೀವನಾಂಶ ನೀಡುವಂತೆ ಪತ್ನಿ ಹಾಗೂ ಆಕೆಯ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ. ಮದುವೆಗೆ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಮದುವೆಗೆ ಹಾಕಿದ್ದ ಬಂಗಾರವೂ ನನ್ನ ಕೈಗೆ ಸಿಕ್ಕಿಲ್ಲ ಎಂದು ಟೆಕ್ಕಿ ಶ್ರೀಕಾಂತ್ ಅಳಲು ತೋಡಿಕೊಂಡಿದ್ದಾರೆ.
ಆಡಿಯೋ ವೈರಲ್: ಇನ್ನೂ ಪತಿ – ಪತ್ನಿ ಮಾತನಾಡಿದ ಆಡಿಯೋವೊಂದು ವೈರಲ್ ಆಗಿದ್ದು, ಆಡಿಯೋದಲ್ಲಿ ಮಕ್ಕಳು ಮಾಡಿಕೊಳ್ಳೋಣ ಅಂತ ಶ್ರೀಕಾಂತ್ ಕೇಳಿದ್ದಕ್ಕೆ ’60 ವರ್ಷ ಆದ್ಮೇಲೆ ಮಾಡಿಕೊಳ್ಳೋಣ ಇಲ್ಲದಿದ್ರೆ.. ನೀವೂ ಹಾಗೆ ಸಾಯಿರಿ, ನಾನು ಹಾಗೇ ಸಾಯ್ತಿನಿ ಅಂದಿದ್ದಾಳೆ. ಈ ಜನ್ಮದಲ್ಲಿ ನಿಮಗೆ ಬುದ್ಧಿ ಬರಲ್ಲ, ಈ ಜನ್ಮದಲ್ಲಿ ನಾವಿಬ್ಬರೂ ಪೋಷಕರಾಗಲ್ಲ, ಪಪ್ಪಾಯ, ಪೈನಾಪಲ್ ರೆಡಿ ಇರುತ್ತೆ ತಿಂದುಬಿಟ್ರೆ ಆಯ್ತು… ನಾನು ನಿಮ್ಮನ್ನ ಹತ್ತಿರಕ್ಕೂ ಸೇರಿಸಲ್ಲ. ಇನ್ನೆಲ್ಲಿ ಮಗು ಆಗುತ್ತೆ ಅಂತ ಪತಿ ಶ್ರೀಕಾಂತ್ ಗೆ ಪತ್ನಿ ಜೋರು ಮಾಡಿದ್ದಾಳೆ ಎಂದು ಶ್ರೀಕಾಂತ್ ಹೇಳಿದ್ದಾರೆ.