Ad imageAd image

ಆಸ್ತಿ ವಿಚಾರವಾಗಿ ಗಲಾಟೆ : ಪತಿಯ ಕಾರಿಗೆ  ಬೆಂಕಿ ಹಚ್ಚಿದ ಪತ್ನಿ 

Bharath Vaibhav
ಆಸ್ತಿ ವಿಚಾರವಾಗಿ ಗಲಾಟೆ : ಪತಿಯ ಕಾರಿಗೆ  ಬೆಂಕಿ ಹಚ್ಚಿದ ಪತ್ನಿ 
WhatsApp Group Join Now
Telegram Group Join Now

ಬೆಳಗಾವಿ: ಆಸ್ತಿ ವಿಚಾರವಾಗಿ ಪತಿ ಹಾಗೂ ಪತ್ನಿ ನಡುವೆ ಆರಂಭವಾದ ಗಲಾಟೆ ತಾರಕ್ಕೇರಿದ್ದು, ಕೋಪದ ಬರದಲ್ಲಿ ಪತ್ನಿ, ಪತಿಯ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಪೊಗತ್ಯಾನಹಟ್ಟಿಯಲ್ಲಿ ಈ ಘಟನೆ ನಡೆದಿದೆ.ಶಿವನಗೌಡ ಪಾಟೀಲ್ ಹಾಗೂ ಪತ್ನಿ ಸಾವಿತ್ರಿ ನಡುವೆ ಹಣಕಾಸು ಹಾಗೂ ಆಸ್ತಿ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಇಂದು ಕೂಡ ಇದೇ ವಿಚಾರವಗಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು ಪತ್ನಿ ರೌದ್ರಾವತಾರ ತಾಳಿದ್ದಾಳೆ.

ಮನೆಯ ಮುಂದಿದ್ದ ಪತಿಯ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಧಗ ಧಗನೆ ಹೊತ್ತಿ ಉರಿದಿದೆ. ಎಲ್ಲರ ಕಣ್ಣೆದುರೇ ಕಾರು ಸುಟ್ಟು ಕರಕಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!