ಬೆಳಗಾವಿ: ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರ ಪರವಾಗಿ ಹೋರಾಡಿದ ಫಲದಿಂದ ನಾವು ಶಿಕ್ಷಣವನ್ನು ಪಡೆದು ಇಷ್ಟೊಂದು ಸ್ವಾತಂತ್ರವಾಗಿ ಜೀವಿಸುತ್ತಿದ್ದೆವೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಪ್ರಶಾಂತರಾವ ಐಹೊಳೆಯವರು ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿತ್ರಿಬಾಯಿ ಪುಲೆ ಅವರು ಹೋರಾಟದ ಫಲವಾಗಿ ಮಹಿಳೆಯರು ಇಂದು ಶಿಕ್ಷಣವನ್ನು ಪಡೆದು ಉನ್ನತ ಸಾಧನೆಯನ್ನು ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲು ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ರಮಾಬಾಯಿ ಭೀಮರಾವ ಅಂಬೇಡ್ಕರ್ ಅವರು ತಮ್ಮ ಪತಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಬೆಂಬಲವಾಗಿ ನಿಂತಿದ್ದರು. ಒಬ್ಬ ಮಹಿಳೆಯಾಗಿ ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದೆನೆ. ಮತ್ತು ಕನ್ನಡಭಾಷೆಯನ್ನು ಸಹ ಕಲಿತು ಕನ್ನಡ ಭಾಷೆಯ ಸೊಗಡನ್ನು ಅರಿತುಕೊಂಡಿದ್ದೆನೆ. ನಮ್ಮ ಅತ್ತೆಯು ಸಹ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳೆ ಸಾಧಸಲು ಸಿದ್ದವಾದರೆ ಎನನ್ನಾದರು ಸಾಧಿಸಬಲ್ಲಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪಾದಕರಾದ ಡಾ. ಎನ್ ಪ್ರಶಾಂತರಾವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ನ್ಯಾಯವಾದಿಗಳಾದ ರವೀಂದ್ರ ತೋಟಿಗೇರ ಮತ್ತು ಶಿಲ್ಪಾ ಗೋದಿಗೌಡರ, ಪಿ ಎಸ್ ಐ ಚಾಂದಬಿ ಗಂಗಾವತಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಪ್ರಕಾಶ ಐಹೊಳ್ಳಿ, ಮಾನಸ ಸಿಕ್ರಂ ಸಂಸ್ಥೆಯ ಸಂಯೋಜಕಿ ಮೀನಾಕ್ಷಿ ತಳವಾರ, ಮೊದಲಾದವರು ಉಪಸ್ಥಿತರಿದರು. ನಿರ್ಮಲ ದೊಡ್ಡಮನಿ ಮತ್ತು ಫರೀದಾ ದೇಸಾಯಿ ನಿರೂಪಿಸಿದರು.