ಬಳ್ಳಾರಿ: ಮಹಿಳೆ ಲೈವ್‌ನಲ್ಲಿ ಮಾತನಾಡುವ ಸಮಯದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಹುಸೇನ್ ನಗರದ ನಿವಾಸಿ ಆಗಿರುವ 23 ವರ್ಷ ವಯಸ್ಸಿನ ಮುನ್ನಿ ಎಂಬುವವರು ಇದೀಗ ಲೈವ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ 6 ತಿಂಗಳಿಂದ ಗಂಡನಿಂದ ಮುನ್ನಿ ದೂರವಾಗಿದ್ದರು. ಮೊಹಮ್ಮದ್ ಶೇಖ್ ಎಂಬಾತನ ಜೊತೆ ಮುನ್ನಿ ಸ್ನೇಹ ಬೆಳೆಸಿದ್ದರು.
ಮದುವೆಯಾಗಿ ಇಬ್ಬರು ಮಕ್ಕಳನ್ನ ಪಡೆದಿದ್ದರೂ ಮುನ್ನಿ ಮತ್ತೊಬ್ಬರ ಜೊತೆಗೆ ಆತ್ಮೀಯತೆ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಹೀಗಿದ್ದಾಗ ದಿಢೀರ್ ವೀಡಿಯೋ ಕಾಲ್‌ನಲ್ಲಿ ಮಾತನಾಡುವ ವೇಳೆ ಮುನ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೊಹಮ್ಮದ್ ಶೇಖ್ ಹಾಗೂ ಮುನ್ನಿ ನಡುವೆ ಕೆಲ ದಿನಗಳ ಹಿಂದಷ್ಟೇ ದೊಡ್ಡ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಮುನ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಸಂಬಂಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




