Ad imageAd image

ರಸ್ತೆ ದಾಟುತ್ತಿದ್ದಾಗ ಡಿಕ್ಕಿ ಹೊಡೆದ ಕಾರು : 10 ಅಡಿ ಹಾರಿ ಬಿದ್ದ ಮಹಿಳೆ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ಭೀಕರವಾದ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿಯಾದ ಭೀಕರ ಅಪಘಾತ ಸಂಭವಿಸಿದೆ. ಘಟನೆ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಒಂದು ಕ್ಷಣ ಮೈ ಜುಮ್ ಎನ್ನುವಂತಿದೆ.

ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂಬುವವರೇ ಗಾಯಗೊಂಡ ಮಹಿಳೆ. ಇವರು ಬೆಳಗ್ಗೆ ಮಗಳು ದೀಪಶ್ರೀ ಅವರೊಂದಿಗೆ ಗುಳಿಗಜ್ಜ ಕಟ್ಟೆಗೆ ಕಾಣಿಕೆ ಹಾಕುವ ಸಲುವಾಗಿ ಬಂದಿದ್ದರು.

ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಿ ರಸ್ತೆಯ ಅಂಚಿಗೆ ತಲುಪುತ್ತಿದ್ದಂತೆ, ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಕಾರು ಇವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!