ಹೈದರಾಬಾದ್: ಮಹಿಳೆಯೊಬ್ಬರು ತನ್ನ ಕೈಗೆ ಕಚ್ಚಿದ ಹಾವನ್ನು ಹೊಡೆದು ಸಾಯಿಸಿ ಡಬ್ಬಿಯಲ್ಲಿ ತುಂಬಿ ಆಸ್ಪತ್ರೆಗೆ ತಂದಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯ ವೆಂಕಟಾಪುರಂ ನಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆಂದು ಹೋಗಿದ್ದ ಮಹಿಳೆಯ ಕೈಗೆ ಹಾವು ಕಚ್ಚಿದೆ. ಭಯಪಡದ ಮಹಿಳೆ ತಕ್ಷಣ ಹಾವನ್ನು ಹೊಡೆದು ಸಾಯಿಸಿದ್ದಾರೆ.
ಬಳಿಕ ಒಂದು ಡಬ್ಬಿಯಲ್ಲಿ ಹಾವನ್ನು ತುಂಬಿಕೊಂಡು ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಪಡೆದಿದ್ದಾರೆ. ಶಾಂತಾ ಗಾಯಗೊಂಡಿರುವ ಮಹಿಳೆ
ಹಾವು ಕಡಿದು ಗಾಯಗೊಮ್ದಿರುವ ಮಹಿಎ ಕೈಯಲ್ಲಿ ಹಾವನ್ನು ಹಿಡಿದು ಬಂದಿರುವುದು ಕಂಡು ಸರ್ಕಾರಿ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳೇ ಗಾಬರಿಯಾಗಿದ್ದಾರೆ. ತಕ್ಷಣ ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.