Ad imageAd image

ದೇವಸ್ಥಾನದಲ್ಲಿ ಕಳ್ಳರ ಕೃತ್ಯ ನೋಡಿದ ಮಹಿಳೆಯನ್ನು ಬಾವಿಗೆ ತಳ್ಳಿ ಕೊಲೆ..??

Bharath Vaibhav
ದೇವಸ್ಥಾನದಲ್ಲಿ ಕಳ್ಳರ ಕೃತ್ಯ ನೋಡಿದ ಮಹಿಳೆಯನ್ನು ಬಾವಿಗೆ ತಳ್ಳಿ ಕೊಲೆ..??
WhatsApp Group Join Now
Telegram Group Join Now

ಬೆಳಗಾವಿ: ಕಳ್ಳರ ಕೃತ್ಯ ನೋಡಿದ ಮಹಿಳೆಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿರುವಂತಹ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಂಬೆಳಗ್ಗೆ ಶಿಂದೊಳ್ಳಿಯ ಮಸಣವ್ವ ದೇವಸ್ಥಾನಕ್ಕೆ ಕಳ್ಳರು ಕನ್ನ ಹಾಕಿದ್ದರು. ಇದೇ ವೇಳೆ ಶಿಂದೊಳ್ಳಿ ಗ್ರಾಮದ ಭಾರತಿ ಪೂಜಾರಿ (48) ಬೆಳಂಬೆಳಗ್ಗೆ ತನ್ನ ಮನೆಯ ದನಕರಗಳ ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಬಂದಿದ್ದರು.ತಮ್ಮ ಮನೆಯ ಪಕ್ಕದಲ್ಲೇ ಮಸಣವ್ವ ದೇಗುಲ ಇದ್ದು, ಅಲ್ಲಿ ಕಳ್ಳರು ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.

ಮಹಿಳೆ ಸಗಣಿ ಎಸೆದು ಮನೆಗೆ ಬರುವಾಗ ದೇಗುಲದಲ್ಲಿ ಕಳ್ಳತನ ಮಾಡುತ್ತಿರುವುದನ್ನು ಅವರು ನೋಡಿದ್ದಾರೆ. ಇದನ್ನು ತಿಳಿದ ಕಳ್ಳರು ಭಾರತಿಯನ್ನು ಹೊತ್ತೊಯ್ದು ದೇಗುಲದ ಹಿಂದಿದ್ದ ಬಾವಿಗೆ ಎಸೆದು ಹತ್ಯೆ ನಡೆಸಿದ್ದಾರೆ.

ಇತ್ತ ಕುಟುಂಬಸ್ಥರು ಭಾರತಿ ಮನೆಗೆ ಬಾರದೇ ಇದ್ದಾಗ ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಈ ವೇಳೆ ದೇಗುಲದ ಎದುರು ಸಗಣಿ ಬುಟ್ಟಿ, ಹಾಗೂ ಚಪ್ಪಲಿ ಕಂಡುಬಂದಿದೆ. ತಕ್ಷಣವೇ ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಭಾರತಿ ಅವರ ಶವ ದೇವಾಲಯದ ಹಿಂದಿದ್ದ ಬಾವಿಯಲ್ಲಿ ಪತ್ತೆಯಾಗಿದೆ.

ಮಸಣವ್ವ ದೇಗುಲದಲ್ಲಿನ ಬೆಳ್ಳಿ ಆಭರಣ ಕದ್ದು ಕಳ್ಳರು ಪರಾರಿಯಾಗಿರುವ ವಿಚಾರ ಕೂಡಾ ತಿಳಿದು ಬಂದಿದೆ. ಬಳಿಕ ಈ ಕೃತ್ಯವನ್ನು ಸ್ಥಳೀಯರೇ ಮಾಡಿದ್ದು, ಕೃತ್ಯ ಕಂಡ ಭಾರತಿಯನ್ನು ಕೊಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!