ಅಹ್ಮದಾಬಾದ್ : ಅಹಮದಾಬಾದ ಖೋಖಾ ಪ್ರದೇಶದಲ್ಲಿ ವಸತಿ : ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬರು ಪ್ರಾಣದ ಹಂಗು ತೊರೆದು ಮಕ್ಕಳನ್ನು ರಕ್ಷಿಸಿದ್ದಾರೆ.
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಿಳೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದ ಮೆಟ್ಟಿಲುಗಳ ಬಾಲ್ಕನಿ ಮೂಲಕ ಮಕ್ಕಳನ್ನು ಎಚ್ಚರಿಕೆಯಿಂದ ಕೆಳಗಿಳಿಸಿದ್ದಾರೆ.
ಕೆಳಗೆ ನೆಲದ ಮೇಲೆ ನಿಂತಿರುವ ಪುರುಷರು ಮಕ್ಕಳನ್ನು ಹಿಡಿದು ಸುರಕ್ಷಿತವಾಗಿ ಕರೆತರುತ್ತಾರೆ. ಶುಕ್ರವಾರ ಮಧ್ಯಾಹ್ನ ಬಹುಮಹಡಿ ವಸತಿ ಕಟ್ಟಡದಲ್ಲಿ ಬೆಂತಿ ಕಾಣಿಸಿಕೊಂಡ ನಂತರ ಕನಿಷ್ಠ 10 ಜನರನ್ನು ರಕ್ಷಿಸಲಾಗಿದೆ.
ಮಧ್ಯಾಹ್ನ 3:30 ರ ಸುಮಾರಿಗೆ ಬೆಂಕಿ ಪ್ರಾರಂಭವಾಯಿತು ಮತ್ತು ಸಂಜೆ 6:00 ವೇಳೆಗೆ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಹಮದಾಬಾದ್ ಅಗ್ನಿಶಾಮಕ ಮತ್ತು ಮುರ್ಮು ಸೇವೆಗಳು (ಎಎಫ್ಇಎಸ್) ತಿಳಿಸಿವೆ.