Ad imageAd image

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕುಟುಂಬವನ್ನ ಹತ್ಯೆಗೈಯಲು ಯತ್ನಿಸಿದ ಮಹಿಳೆ

Bharath Vaibhav
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕುಟುಂಬವನ್ನ ಹತ್ಯೆಗೈಯಲು ಯತ್ನಿಸಿದ ಮಹಿಳೆ
WhatsApp Group Join Now
Telegram Group Join Now

ಹಾಸನ: ತನ್ನ ಅಕ್ರಮ ಸಂಬಂಧಕ್ಕೆ ಕುಟುಂಬದವರು ಅಡ್ಡಿಯಾಗಿದ್ದಾರೆಂದು ಮನೆಯವರನ್ನೆಲ್ಲ ವಿಷವಿಟ್ಟು ಕೊಂದು ಹಾಕಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೆರಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೈತ್ರಾ (33) ಬಂಧಿತ ಮಹಿಳೆ.ಊಟದಲ್ಲಿ ವಿಷ ಬೆರೆಸಿ ಪತಿ, ಮಕ್ಕಳು, ಅತ್ತೆ-ಮಾವ ಎಲ್ಲರನ್ನೂ ಕೊಲೆ ಮಾಡಲು ಯತ್ನಿಸಿದ್ದಳು. ಇದನ್ನು ತಿಳಿದ ಪತಿ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚೈತ್ರಾ ಹಾಗೂ ಆಕೆಯ ಪ್ರಿಯಕರನ್ನು ಬಂಧಿಸಿದ್ದಾರೆ.

 

11 ವರ್ಷಗಳ ಹಿಂದೆ ಚೈತ್ರಾ, ಗಜೇಂದ್ರನ ಜೊತೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಈ ನಡುವೆ ಚೈತ್ರಾಳಿಗೆ ಪುನೀತ್ ಎಂಬಾತ ಪರಿಚಯವಾಗಿ ಇಬ್ಬರ ನಡುವೆ ಸಲುಗೆ, ಅನೈತಿಕ ಸಂಬಂಧಕ್ಕೆ ತಿರುಗಿದೆ. ವಿಷಯ ತಿಳಿದ ಪತಿ, ಚೈತ್ರಾಳ ತಂದೆ-ತಾಯಿಗೆ ಹೇಳಿದ್ದ. ಎಲ್ಲರೂ ಸೇರಿ ರಾಜಿಪಂಚಾಯಿತಿ ಮಾಡಿದ್ದರು. ಬಳಿಕ ಚೈತ್ರಾ ಪತಿ ಜೊತೆಗೆ ಚೆನ್ನಾಗೇ ಇದ್ದಳು. ಈ ಘಟನೆ ಬಳಿಕ ಚೈತ್ರಾಳಿಗೆ ಶಿವು ಎಂಬಾತನ ಪರಿಚಯವಾಗಿದೆ.

ಈ ಪರಿಚಯವೂ ಅನೈತಿಕ ಸಂಬಂಧಕ್ಕೆ ತಿರುಗಿದ್ದು, ಚೈತ್ರಾ ಈ ವಿಷಯ ಮನೆಯಲ್ಲಿ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಶಿವು ಸಹಾಯದೊಂದಿಗೆ ಊಟದಲ್ಲಿ ವಿಷ ಬೆರೆಸಿ ಪತಿ, ಮಕ್ಕಳು, ಹಾಗೂ ಅತ್ತೆ-ಮಾವನಿಗೆ ಕೊಡುತ್ತಿದ್ದಳು. ಇಬ್ಬರ ನಡುವಿನ ಮಾತುಕತೆ ಗೊತ್ತಾಗುತ್ತಿದ್ದಂತೆ ಪತಿ ಗಜೇಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚೈತ್ರ ಹಾಗೂ ಆಕೆಯ ಪ್ರಿಯತಮ ಅರೆಸ್ಟ್ ಆಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!