Ad imageAd image

ಅವ್ವನಿಗೆ ಬಂಗಾರ ಇಷ್ಟವೆಂದು ಕಳ್ಳತನ ಮಾಡಿ ಸಿಕ್ಕಿಬಿದ್ದ ಯುವಕ 

Bharath Vaibhav
ಅವ್ವನಿಗೆ ಬಂಗಾರ ಇಷ್ಟವೆಂದು ಕಳ್ಳತನ ಮಾಡಿ ಸಿಕ್ಕಿಬಿದ್ದ ಯುವಕ 
WhatsApp Group Join Now
Telegram Group Join Now

ಬೆಳಗಾವಿ : ಅಮ್ಮನಿಗೆ ಚಿನ್ನ ಇಷ್ಟ ಎಂಬ ಕಾರಣಕ್ಕೆ ಮಗನೊಬ್ಬ ಇಟಿಎಂ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಅಪರೂಪದ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ.

ಬೆಳಗಾವಿಯ ಜ್ಯೋತಿ ನಗರ ನಿವಾಸಿ ಕೃಷ್ಣಾ ಸುರೇಶ್ (23) ಎಂಬಾತ ಕಳೆದ ಎರಡು ದಿನಗಳ ಹಿಂದೆಯಷ್ಟೆ ಹೆಚ್‌ಡಿಎ‌ಫ್‌ಸಿ ಬ್ಯಾಂಕ್‌ನಲ್ಲಿದ್ದ ಸುಮಾರು 8.65 ಲಕ್ಷ ರೂಪಾಯಿ ಹಣ ಕಳ್ಳತ‌ನವಾಗಿತ್ತು.

ಕಳ್ಳತನ ವಿಚಾರ ಬೆಳಕಿಗೆ ಬರ್ತಿದ್ದಂತೆಯೇ ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅದರಂತೆ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಎಟಿಎಂಗೆ ಬಂದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಈ ವೇಳೆ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದು ಕೃಷ್ಣಾ ಸುರೇಶ್ ಎಂದು ಖಚಿತವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕಸ್ಟೋಡಿಯನ್ ಆಗಿ ಕೆಲಸ ಮಾಡ್ತಿದ್ದ. ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲಾ ಹೆಚ್‌ಡಿಎಫ್‌ಸಿ ಎಟಿಎಂಗೆ ಹಣ ಹಾಕ್ತಿದ್ದ.

ಅಂತೆಯೇ ಎರಡು ದಿನಗಳ ‌ಹಿಂದೆ ಎಚ್‌ಡಿಎಫ್‌ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ. ಕೆಲವು ಹೊತ್ತಿನ ಬಳಿಕ‌ ತಾನೇ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದಾನೆ.

ವಿಶೇಷ ಎಂದರೆ ಕದ್ದ ಹಣದಲ್ಲಿ ಮೊದಲು ಅಮ್ಮನ ಆಸೆಯಂತೆ 20ಗ್ರಾಂ ಚಿನ್ನ ಸರವನ್ನು ಮಾಡಿಸಿಕೊಟ್ಟಿದ್ದಾನೆ. ಅಷ್ಟೇ ಅಲ್ಲದೆ ಉಳಿದ ಹಣದಲ್ಲಿ ಮೋಜು ಮಸ್ತಿ ಮಾಡಲು ಮುಂದಾಗಿದ್ದಾನೆ. ಪ್ರಕರಣ ‌ಬೇಧಿಸಿದ ಪೊಲೀಸರು 5.74 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!