ಚಿಕ್ಕೋಡಿ : ಕಾಲೇಜಿಗೆ ಹೋಗು ಎಂದು ತಂದೆತಾಯಿ ಬುದ್ದಿವಾದ ಹೇಳಿದ್ದರೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.
ಸಾಗರ್ ತುಕಾರಾಂ ಕುರಾಡೆ (20) ಮೃತ ಯುವಕ. ಸದಲಗಾ ಸರಕಾರಿ ಕಾಲೇಜಿನಲ್ಲಿ ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಈತ ಕೆಲ ದಿನದಿಂದ ಕಾಲೇಜಿಗೆ ಸತತವಾಗಿ ಬಂಕ್ ಹೊಡೆದು ಪೋಲಿ ಅಲೆಯುತ್ತಿದ್ದ.
ಇದೇ ಕಾರಣಕ್ಕೆ ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಯುವಕ ಮನೆಯ ಪಕ್ಕದ ಜಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಗರ್ ತಂದೆ ತುಕಾರಾಂ ಕಾರ್ಖಾನೆ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.