ಹುಬ್ಬಳ್ಳಿ: ಯುವಕನೊಬ್ಬ ತನ್ನ ಪ್ರೇಯಸಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನಂತರ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ನಡೆದಿದೆ.
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ್ ಉಣಕಲ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ.ಸಂದೇಶ್ ಶನಿವಾರ ಮನೆಯಿಂದ ನಾಪತ್ತೆಯಾಗದ್ದ. ನಂತರ ಆತ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಇನ್ನು ಆತ್ಮಹತ್ಯೆಗೂ ಮುನ್ನ ಸಂದೇಶ್, ನನ್ನ ಸಾವಿಗೆ ಸಂಜನಾ ಕಾರಣ ಎಂದು ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ.
ಮಾತ್ರವಲ್ಲದೇ ತನ್ನ ಸ್ನೇಹಿತರಿಗೆ ಆಕೆಯ ಖಾಗಿ ಫೋಟೋಗಳು, ವಿಡಿಯೋಗಳು ಹಾಗೂ ಖಾಸಗಿ ವಾಟ್ಸಪ್ ಚಾಟ್‌ಗಳನ್ನು ಹಂಚಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಮಾಡಿದ್ದಾನೆ.
ಸಂದೇಶ್ ಮೋಟಾರ್ ಬೈಕ್ ಶೋರೂಂ ನಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಪ್ರೇಯಸಿಯ ಕಾಟಕ್ಕೆ ಬೇಸತ್ತು ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.