Ad imageAd image

ಇನ್‌ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ

Bharath Vaibhav
ಇನ್‌ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ
WhatsApp Group Join Now
Telegram Group Join Now

ರಾಯಚೂರು: ಪ್ರೇಯಸಿ ಕೈಕೊಟ್ಟಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಜನತಾ ಹೌಸ್‌ನಲ್ಲಿ ನಡೆದಿದೆ.

ಮಾನ್ವಿ ನಿವಾಸಿ ವರುಣ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಾವನ ಜತೆ ಪ್ರೇಯಸಿಯ ಮದುವೆ ನಿಶ್ಚಯವಾಗಿದ್ದಕ್ಕೆ ಖಿನ್ನತೆಗೊಳಗಾಗಿದ್ದ ಯುವಕ, ಮನೆಯಲ್ಲಿ ಸೀರೆಯಿಂದ ನೇಣುಬಿಗಿದುಕೊಂಡಿದ್ದಾನೆ.

ಇನ್‌ಸ್ಟಾಗ್ರಾಂ ಮೂಲಕ ವರುಣ್‌ಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ದೇವಿಕಾ ಎಂಬ ಯುವತಿಯ ಪರಿಚಯವಾಗಿತ್ತು. 5 ವರ್ಷಗಳ ಹಿಂದೆಯೇ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿ ಅರಳಿತ್ತು.

 ರಾಯಚೂರಿನಲ್ಲಿ 3 ವರ್ಷಗಳ ಕಾಲ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ದೇವಿಕಾಗೆ, ನಾಲ್ಕೈದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ವರುಣ್‌ನ ಯುವತಿ ದೂರ ಮಾಡಿದ್ದಳು.

ಪ್ರೇಯಸಿ ದೂರವಾಗಿದ್ದರಿಂದ ಮನನೊಂದು ಕೊನೆಯ ಬಾರಿ ಬಾರಿ ವಿಡಿಯೊ ಕಾಲ್ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವರುಣ್ ಶವ ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!