ಕೋಲಾರ : ಹೆತ್ತವರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಷ್ಟಪಟ್ಟು ಸಾಕಿ-ಸಲುಹಿ ಬೆಳೆಸುತ್ತಾರೆ. ಮಕ್ಕಳು ತಪ್ಪು ದಾರಿ ಹಿಡಿಯದಂತೆ ಬೈದು ಬುದ್ಧಿ ಮಾತನ್ನು ಹೇಳುವುದು ಸಹಜ.
ಆದ್ರೆ ತಂದೆ-ತಾಯಿ ತನ್ನ ಒಳಿತಿಗಾಗಿ ಬುದ್ಧಿ ಹೇಳಿದ್ದಾರೆ ಎಂದು ಕನಿಷ್ಠ ಯೋಚಿಸದೇ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಕುಂಬರಪಾಳ್ಯದಲ್ಲಿ ನಡೆದಿದೆ.
29 ವರ್ಷದ ಗಣೇಶ್ ಎಂಬುವವನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೂಸೈಡ್ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಮದುವೆಯಾಗಿ ಒಂದು ವರ್ಷ ಆಗಿದೆ. ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು ಸಂಸಾರ ನಡೆಸು. ಕೆಲಸ ಮಾಡದೇ ಸ್ನೇಹಿತರೊಂದಿಗೆ ಸುಮ್ಮನೇ ತಿರುಗಾಡಿ ಕಾಲಹರಣ ಮಾಡಬೇಕು. ಜವಾಬ್ದಾರಿಯಿಂದ ಜೀವನ ನಡೆಸು ಎಂದು ಹೆತ್ತವರು ಗಣೇಶ್ಗೆ ಕಿವಿಮಾತು ಹೇಳಿದ್ದರಂತೆ.
ಈ ಕಾರಣಕ್ಕೆ ಗಣೇಶ್ ಮನನೊಂದು ಇಂತಹ ಕೆಟ್ಟ ನಿರ್ಧಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಮುಳಬಾಗಿಲು ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.