ಕಲಬುರಗಿ: ಟ್ರ್ಯಾಕ್ಟರ್ ಚಲಿಸುವಾಗ ರೀಲ್ಸ್ ಮಾಡುತ್ತಿದ್ದ ಯುವಕ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರದಲ್ಲಿ ನಡೆದಿದೆ.
ಕಮಲಾಪುರದ ಲೋಕೇಶ್ ಪೂಜಾರಿ(23) ಮೃತಪಟ್ಟಯುವ ರೈತ. ಟ್ರಾಕ್ಟರ್ ಚಾಲಕನಾಗಿದ್ದ ಲೋಕೇಶ್ ಟ್ರಾಕ್ಟರ್ ಮಾಡುವಾಗ ಒಂದು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ಮಾಡುತ್ತಾ ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡಿದ್ದಾನೆ.ಆಯತಪ್ಪಿ ಕೆಳಗೆ ಬಿದ್ದ ಆತನ ಮೇಲೆ ಟ್ರ್ಯಾಕ್ಟರ್ ಚಕ್ರ ಹತ್ತಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾಲಕನಿಲ್ಲದೆ ಟ್ರ್ಯಾಕ್ಟರ್ ಚಲಿಸುತ್ತಿರುವುದನ್ನು ಕಂಡ ಪಕ್ಕದ ಹೊಲದವರು ಬಂದು ನೋಡಿದಾಗ ಲೋಕೇಶ್ ಪೂಜಾರಿ ಮೃತಪಟ್ಟಿರುವುದು ಗೊತ್ತಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




