Ad imageAd image

ಹೃದಯಾಘಾತದಿಂದ ಯುವಕ ಸಾವು

Bharath Vaibhav
ಹೃದಯಾಘಾತದಿಂದ ಯುವಕ ಸಾವು
Man holding chest over heart attack symbol vector. Patient suffering from breast ache illustration. Cardiac problem, coronary disease. Paper cut origami craft art icon
WhatsApp Group Join Now
Telegram Group Join Now

ಹಾಸನ:  ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.‌

ಮೃತನನ್ನು ರಕ್ಷಿತ್ (26) ಎಂದು ಗುರುತಿಸಲಾಗಿದೆ. ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ, ಪ್ರವೀಣ್ ಜೊತೆ ಡಿ.31 ರಂದು ರಕ್ಷಿತ್ ಗೋವಾಗೆ ತೆರಳಿದ್ದರು. ಡಿ.31 ರಂದು ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಿದ್ದರು. ಜ.1 ರಂದು ತಿಂಡಿ ಮುಗಿಸಿದ ರಕ್ಷಿತ್, ಚಿದಂಬರಂ ಹಾಗೂ ಪ್ರವೀಣ್ ಗೋವಾದಲ್ಲಿ ತಿರುಗಾಡುತ್ತಿದ್ದರು.‌ ಈ ವೇಳೆ ರಕ್ಷಿತ್‌ಗೆ ದಿಢೀರ್ ಹೃದಯಾಘಾತವಾಗಿದೆ.

ಕೂಡಲೇ ಸ್ಥಳೀಯ ಆಸ್ಪತ್ರೆಗೆ ಜೊತೆಯಲ್ಲಿದ್ದವರು ಕರೆದೊಯ್ದಿದ್ದರು. ಅಷ್ಟರಲ್ಲಿ ರಕ್ಷಿತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!