Ad imageAd image
- Advertisement -  - Advertisement -  - Advertisement - 

ಬೈಕ್ ರಿಪೇರಿ ಮಾಡಿಲ್ಲ ಎಂದು ಕಲಬುರ್ಗಿಯಲ್ಲಿ ಎಲೆಕ್ಟ್ರಿಕ್ ಶೋರೂಂ ಗೆ ಬೆಂಕಿ ಹಚ್ಚಿದ ಯುವಕ ಮಹಮ್ಮದ್.

Bharath Vaibhav
ಬೈಕ್ ರಿಪೇರಿ ಮಾಡಿಲ್ಲ ಎಂದು ಕಲಬುರ್ಗಿಯಲ್ಲಿ ಎಲೆಕ್ಟ್ರಿಕ್ ಶೋರೂಂ ಗೆ ಬೆಂಕಿ ಹಚ್ಚಿದ ಯುವಕ ಮಹಮ್ಮದ್.
WhatsApp Group Join Now
Telegram Group Join Now

ಕಲಬುರಗಿ:- ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋರೂಂಗೆ ಬೆಂಕಿ ಇಟ್ಟ ಆರೋಪದ ಮೇಲೆ ಯುವಕನೋರ್ವ ಪೊಲೀಸರ ಅತಿಥಿಯಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಮಹಮ್ಮದ್ ನದೀಮ್ ಎಂಬ ಯುವಕ ಬೆಂಕಿ ಹಚ್ಚಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದು ಆತನನ್ನು ಬಂಧಿಸಲಾಗಿದೆ.

ಸೋಮವಾರ ಬೆಳಗ್ಗೆ ಓಲಾ ಎಲೆಕ್ಟ್ರಿಕ್ ಬೈಕ್‌ ಶೋರೂಂಗೆ ಬೆಂಕಿ ತಗುಲಿತ್ತು ಆರಂಭದಲ್ಲಿ ಎಲ್ಲರೂ ಇದು ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎಂದು ನಂಬಿದ್ದರು. ಆದರೆ ಪೊಲೀಸರ ತನಿಖೆಯ ವೇಳೆ ಯುವಕ ನದೀಮ್ ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ.

ಮಹಮ್ಮದ್ ನದೀಮ್ ಎಂಬ ವ್ಯಕ್ತಿ ತನ್ನ ಏಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ಬಳಿಕ ಪೆಟ್ರೋಲ್ ತಂದು ಶೋರೂಂ ಒಳಗೆ ಬೆಂಕಿ ಹಚ್ಚಿದ್ದು ಬಯಲಾಗಿದೆ.

ಘಟನೆ ಸಂಬಂಧ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.ಬೆಂಕಿ ಹೊತ್ತಿಕೊಂಡ ಘಟನೆಯಲ್ಲಿ ಆರು ಹೊಸ ಎಲೆಕ್ಟ್ರಿಕ್ ಬೈಕ್ ಗಳು ಸುಟ್ಟು ಭಸ್ಮವಾಗಿವೆ.
ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಕೇವಲ 20 ದಿನದ ಹಿಂದೆ ಓಲಾ ಕಂಪನಿಯ ಸ್ಕೂಟರ್ ಖರೀದಿಸಿದ್ದ ಆರೋಪಿಯ ಬೈಕ್ ಪದೇ ಪದೇ ರಿಪೇರಿಗೆ ಬರುತ್ತಿದೆ ಎಂದು ಸಿಟ್ಟಾಗಿದ್ದ ಎಂದು ತಿಳಿದುಬಂದಿದೆ.

ಸಾಕಷ್ಟು ಬಾರಿ ಶೋರೂಂಗೆ ಬಂದು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದೆ. ಆದರೆ ಶೋರೂಮ್‌ನ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಇದರಿಂದ ಬೇಸತ್ತು, ನಿನ್ನೆ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇನೆ” ಎಂದು ಪೊಲೀಸರ ತನಿಖೆಯ ವೇಳೆ ಆರೋಪಿ ಬಾಯಿಬಿಟ್ಟುರುವುದು ತಿಳಿದುಬಂದಿದೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!