ಬಾಗಲಕೋಟೆ : ತನ್ನ ಸಹೋದರಿಗೆ ಚುಡಾಯಿಸಿದನೆಂದು ಯುವಕನೋರ್ವನಿಗೆ ಅಪ್ರಾಪ್ತ ಬಾಲಕನೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕ ಮೊಹಮ್ಮದ್ ಆಸೀಫ್ ನದಾಫ್ ಎಂಬ ಯುವಕನಿಗೆ ಚಾಕು ಇರಿದು ಆಸೀಫ್ ಅಪ್ರಾಪ್ತನ ಸಹೋದರಿ ಸೈಕಲ್ ಅಡ್ಡಗಟ್ಟಿ ಚುಡಾಯಿಸಿದ್ದ. ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆರಂಭದಲ್ಲಿ ಜಗಳ ನಡೆದಿತ್ತು. ಕಿತ್ತಾಟದ ವಿಚಾರ ತಿಳಿದು ಮುಸ್ಲಿಮ್ ಸಮಾಜದ ಹಿರಿಯರು ಇಬ್ಬರನ್ನು ಸಂಧಾನ ಮಾತುಕತೆಗೆ ಕರೆದಿದ್ದರು.
ಸಂಧಾನ ಮಾತುಕತೆ ವೇಳೆ ಆಸೀಫ್ ಹಾಗೂ ಅಪ್ರಾಪ್ತ ಬಾಲಕನ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಜಗಳ ಜೋರಾಗುತ್ತಿದ್ದಂತೆ ಬಾಲಕ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಆಸೀಫ್ ತಲೆ, ಮೂಗು,ಕೆನ್ನೆಯ ಭಾಗಗಳಲ್ಲಿ ಚಾಕು ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡ ಆಸೀಫ್‌ನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ನವನಗರ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.