ಚನ್ನಮ್ಮನ ಕಿತ್ತೂರು :ಅನಾರೋಗ್ಯ ಹೊಂದಿದ್ದ ತಂದೆ ತಾಯಿಗಳು ಆರೋಗ್ಯವಂತರಾಗಿದ್ಧರಿಂದ ಬಸಾಪುರ ಗ್ರಾಮದಿಂದ ಉಳವಿಯ ಚನ್ನಬಸವೇಶ್ವರ ಕ್ಷೇತ್ರ ವರೆಗೆ ಚಕ್ಕಡಿಯನ್ನು ಹೆಗಲ ಮೇಲೆ ಹೊತ್ತುಎಳೆದುಕೊಂಡು 110 ಕಿ.ಮಿ ವರೆಗೆ ಕ್ರಮಿಸುವ ಮೂಲಕ 24 ರ ಯುವಕ ಹರಕೆಯನ್ನು ತಿರಸಿದ್ಧಾನೆ.
ಕಿತ್ತೂರ ತಾಲೂಕಿನ ಬಸಾಪುರ ಶೀಗಿಹಳ್ಳಿ ಕೆ ಎ ಗ್ರಾಮದ ಶ್ರೀ ದರ ಪಾಟೀಲ ಎಂಬ ಯುವಕ ಎರಡು ವರ್ಷದ ಹಿಂದೆ ಈತನ ತಂದೆ ತಾಯಿ ಅನಾರೋಗ್ಯದಿಂದ ಇದ್ದ ಸಂದರ್ಭದಲ್ಲಿ ಇವರು ಬೇಗನೆ ಗುಣಮುಖರಾದರೆ ಉಳವಿಯ ಚನ್ನಬಸವೇಶ್ವರ ಕ್ಷೇತ್ರ ವರೆಗೆ ಚಕ್ಕಡಿಯನ್ನು ಎಳೆದುಕೊಂಡು ಬರುವ ಮೂಲಕ ಭಕ್ತಿಯ ಅರ್ಪಿಸುತ್ತೇನೆಂಬ ಹರಕೆ ಹೊತ್ತಿದ್ಧ ಉಳವಿ ಕ್ಷೇತ್ರಕ್ಕೆ ಕೇವಲ ಬರ್ರಿ ಗೈಯಲ್ಲಿ ಹೋಗುವ ಹರ ಸಾಹಸ ಪಡುತ್ತಿರುವ ಈ ಸಂದರ್ಭದಲ್ಲಿ
ಈ ಯುವಕ ಯಾರ ಸಹಾಯವಿಲ್ಲದೇ ಚಕ್ಕಡಿಯನ್ನು ತಾನೇ ಎಳೆದುಕೊಂಡು ಹೋಗುವ ಸಹಾಸ ಕಾರ್ಯವನ್ನು ಮಾಡಿದ್ದಾನೆ.

ಈತನ ಗ್ರಾಮದಿಂದ ಉಳವಿಯ ಚನ್ನಬಸವೇಶ್ವರ ಕ್ಷೇತ್ರ ವರೆಗೆ 110 ಕಿ ಮಿ. ಇದ್ದು ಈ ಯುವಕನ ಹರಕೆ ಈಡೇರಿ ಸುಮಾರು ಎರಡು ವರ್ಷವಾಗಿತ್ತು. ಆದರೆ ಈತನಿಗೆ ಹರಕೆ ತಿರಿಸುವ ಸಮಯ ಒದಗಿ ಬಂದಿರಲಿಲ್ಲ ಈ ವರ್ಷ 2025 ರ ಜಾತ್ರೆಯ ಸಂದರ್ಭದಲ್ಲಿ ಯಶಸ್ವಿಯಿತು ಎಂದು ಯುವಕ ಶ್ರೀ ದರ ಪಾಟೀಲ ಹೇಳಿದರು.
ಉಳವಿಯ ಜಾತ್ರೆಗೆ ಪ್ರತಿ ವರ್ಷ ಹೋಗುತ್ತಿರುವ ತಮ್ಮೂರಿನ ಕೆಲವು ಎತ್ತಿನ ಚಕ್ಕಡಿಗಳ ಜೊತೆಗೆ ಇತನದೊಂದು ಚಕ್ಕಡಿಯನ್ನು ಸಿದ್ದಪಡಿಸಿಕೊಂಡು ಚಕ್ಕಡಿಗೆ ನಂದಿ ಧ್ವಜ ಕಟ್ಟಿ ಮತ್ತು ಚನ್ನಬಶ್ವೇವರ ಭಾವಚಿತ್ರವನ್ನು ಚಕ್ಕಡಿಗೆ ಕಟ್ಟಿಕೊಂಡು ಚಕ್ಕಡಿಯನ್ನು ಸಿದ್ದಪಡಿಸಿಕೊಂಡು ಫೆಬ್ರವರಿ 3 ರಂದು ಸಂಜೆ 5 ಘಂಟೆಗೆ ತಮ್ಮ ಗ್ರಾಮದಿಂದ ಹರ ಹರ ಮಹಾದೇವ ಎಂಬ ಘೋಷಣೆಯೊಂದಿಗೆ ಚಕ್ಕಡಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕಾಲ್ನಡಿಗೆಯ ಮೂಲಕ ಪ್ರಾರಂಭ ಮಾಡಿದನ್ನು ಮುಂದೆ ಕಕ್ಕೇರಿ, ಯಡೋಗಾ, ಬಲೋಗಾ, ನಂತರ ದಾಂಡೇಲಿ ಸೇರಿದಂತೆ ಹೀಗೆ ಮೂರು ಸ್ಥಳಗಳಲ್ಲಿ ವಾಸ್ತವ್ಯ ಮಾಡಿ ಕೊನೆಗೆ ನಾಲ್ಕನೆಯ ದಿವಸ ಬೆಳ್ಳಗೆ 9 ಘಂಟೆಗೆ ಉಳವಿಯ ಚನ್ನಬಸವೇಶ್ವರ ಹೋಗಿ ದೇವರ ದರ್ಶನವನ್ನು ಪಡೆದುಕೊಂಡನು. ಈತ ಕ್ಷೇತ್ರಕ್ಕೆ ಹೊಗುತ್ತಿದ್ದಂತೆ ಎಲ್ಲರೂ ಜೈ ಕಾರಗಳನ್ನು ಕೂಗುತ್ತ ಇತನನ್ನು ಸ್ವಾಗತಿಸಿಕೊಂಡರು. ನಂತರ ಕ್ಷೇತ್ರದ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಇವರು ಈ ಯುವಕನಿಗೆ ಸನ್ಮಾಸಿ ಆಶೀರ್ವದಿಸಿದರು.
ನಂತರ ಉಳವಿ ಚನ್ನಬಶ್ವೇವರ ದೇವಸ್ಥಾನದಲ್ಲಿ ಒಂದ ಕ್ವಿಂಟಾಲ್ ಜೋಳದ ಚೀಲ ಹೊತ್ತು 5 ಸುತ್ತ ಪ್ರದಕ್ಷಿಣೆ ಹಾಕಿದನು.ಈ ಸಂದರ್ಭದಲ್ಲಿ ಮಡಿವಾಳಯ್ಯ ಹಿರೇಮಠ, ಬಸವರಾಜ ಭಿಮರಾಣಿ, ಚಂದ್ರಗೌಡ ಪಾಟೀಲ, ಮಡಿವಾಳಪ್ಪ ಭಿಮರಾಣಿ, ಈಶ್ವರಯ್ಯ ಹಿರೇಮಠ, ಉಪಸ್ಥಿತರಿದ್ದರು.
ವರದಿ:ಬಸವಾರಾಜ ಭಿಮರಾಣಿ




