ಕೋಲಾರ : ಹನಿ ನೀರೂ ಬೆರೆಸದೆ ಐದು ಬಾಟಲ್ ಮದ್ಯ ಕುಡಿಯುವುದಾಗಿ ಹತ್ತು ಸಾವಿರ ರೂ. ಪಂಥ ಕಟ್ಟಿದ ಯುವಕನೊಬ್ಬ ಜೀವಕಳೆದುಕೊಂಡಿರುವ ಘಟನೆ ಕೋಲಾರದ ನುಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ತಿಕ್ (21) ಮೃತ ಯುವಕನಾಗಿದ್ದು, ಹತ್ತು ದಿನಗಳ ಹಿಂದಷ್ಟೇ ಈತನ ಪತ್ನಿ ಮಗುವಿಗೆ ಜನ್ಮ ನೀಡಿದ್ದಳು.
ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ನಿವಾಸಿಯಾಗಿದ್ದ ಮೃತ ಕಾರ್ತಿಕ್ , ತನ್ನದೇ ಊರಿನ ಸುಬ್ರಮಣಿ, ವೆಂಕಟರೆಡ್ಡಿ ಹಾಗೂ ಮತ್ತಿತರ ಮೂವರು ಸ್ನೇಹಿತರೊಂದಿಗೆ ಪಂಥ ಕಟ್ಟಿದ್ದ. ಪಂಥದಲ್ಲಿ ಭಾಗವಹಿಸಿ ಐದು ಬಾಟಲ್ ಮದ್ಯವನ್ನು ಕುಡಿದಿದ್ದ. ಕೂಡಲೇ ಅಸ್ವಸ್ಥನಾಗಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕಾರ್ತಿಕ್ ಸಾವನ್ನಪ್ಪಿದ್ದಾನೆಹ
ನುಂಗಲಿ ಠಾಣೆಯಲ್ಲಿ ಕಾರ್ತಿಕ್ ಸ್ನೇಹಿತರ ವಿರುದ್ದ ದೂರು ದಾಖಲಾಗಿದೆ. ಕಾರ್ತಿಕ್ ಸಾವನ್ನಪ್ಪುತ್ತಿದ್ದಂತೆಯೇ ವೆಂಕಟರೆಡ್ಡಿ ಮತ್ತು ಸುಬ್ರಮಣಿ ಬಂಧಿಸಲ್ಪಟ್ಟಿದ್ದು ಇತರರು ತಲೆಮರೆಸಿಕೊಂಡಿದ್ದಾರೆ.