ಬೆಳಗಾವಿ: ಗೆಳೆಯರೊಂದಿಗೆ ಜೊತೆಗೆ ಪಾರ್ಟಿಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಖಾನಾಪುರ ತಾಲೂಕಿನ ಜಾಂಬೋಟಿ ಸಮೀಪದ ರೆಸಾರ್ಟ್ ನಲ್ಲಿ ನಡೆದಿದೆ. ಬೆಳಗಾವಿಯ ಖಾಸಬಾಗ ನಿವಾಸಿ ಮಹಾಂತೇಶ ಗುಂಜಿಕರ(22) ಮೃತಪಟ್ಟ ಯುವಕ.
20ಕ್ಕೂ ಹೆಚ್ಚು ಸ್ನೇಹಿತರ ಜೊತೆಗೆ ಮಹಾಂತೇಶ ರೆಸಾರ್ಟ್ ಗೆ ತೆರಳಿದ್ದ. ಖಾನಾಪುರ ತಾಲೂಕಿನ ಜಾಂಬೋಟಿ ಸಮೀಪದ ರೆಸಾರ್ಟ್ ಗೆ ಹೋಗಿದ್ದು, ಈಜುಕೊಳದಲ್ಲಿ ಮೃತಪಟ್ಟಿದ್ದಾನೆ ಎಂದು ಸ್ನೇಹಿತರು ಹೇಳಿದ್ದಾರೆ.
ಸ್ನೇಹಿತರು ಜೊತೆಗೆ ಇದ್ದಾಗ ಒಬ್ಬನೇ ಸತ್ತಿದ್ದು ಹೇಗೆ ಎಂದು ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅವರೇ ಏನೋ ಮಾಡಿದ್ದಾರೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಾಂತೇಶನ ಶವ ಇರಿಸಲಾಗಿದೆ.
ಪೊಲೀಸರ ಜೊತೆಗೆ ಮಹಾಂತೇಶನ ಪೋಷಕರು ಮತ್ತು ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ಮಹಾಂತೇಶ ಜೊತೆಗಿದ್ದವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.