ಕೌಲಾಲಂಪುರ್: ಮಲೇಷಿಯಾದ ಬಿಲಿಯನೇರ್ ಆನಂದ ಕೃಷ್ಣನ್ ಅವರ ಏಕೈಕ ಪುತ್ರ ವೆನ್ ಅಜಾನ್ ಸಿರಿಪಾನ್ಯೊ ಅವರು ಬೌದ್ಧ ಸನ್ಯಾಸಿಯಾಗಲು ತಮ್ಮ ಎಲ್ಲಾ ಸಂಪತ್ತನ್ನು ತ್ಯಜಿಸಿದ್ದಾರೆ.
ಅಜಾಮ್ ಸಿರಿಪಾನ್ಯೊ ತಾಯಿ ಮೊಮ್ವಜಾರೋಂಗ್ಸೆ ಸುಪ್ರಿಂದಾ ಚಕ್ರಬನ್ ಥಾಯ್ ರಾಜಮನೆತನದ ವಂಶಸ್ಥರು ಅಜಾನ್ ಸಿರಿಪಾನ್ಯೊ ತಮ್ಮ ತಾಯಿಯ ಕುಟುಂಬಕ್ಕೆ ಗೌರವ ಸಲ್ಲಿಸಲು ಥೈಲ್ಯಾಂಡ್ಗೆ ಹೋಗಿದ್ದ. ಈ ವೇಳೆ ತಾತ್ಕಾಲಿಕವಾಗಿ ದೀಕ್ಷೆ ಪಡೆದಿದ್ದರು.
ಇದೀಗ ಶಾಶ್ವತವಾಗಿ ದೀಕ್ಷೆ ಪಡೆದಿದ್ದಾರೆ. ಸದ್ಯ ಥಾಯ್ಲೆಂಡ್-ಮ್ಯಾನ್ಮಾರ್ ಗಡಿಯಲ್ಲಿರುವ ಡಿಟಾವೊ ದಮ್ ಮಠದಲ್ಲಿ ಮಠಾಧೀಶರಾಗಿ ನೆಲೆಸಿದ್ದಾರೆ ಎಂದು ವರದಿಯಾಗಿದೆ.
ಅದೇ ರೀತಿ ಅಜಾನ್ ಅವರ ತಂದೆ ಆನಂದ್ ಕೃಷ್ಣನ್ ಅವರನ್ನು ಎಕೆ ಎಂದು ಕರೆಯಲಾಗುತ್ತದೆ. ಇವರು ಮಲೇಷ್ಯಾದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ವರದಿಗಳ ಪ್ರಕಾರ, ಆನಂದ್ ಕೃಷ್ಣನ್ ಅವರು 5 ಶತಕೋಟಿ ಡಾಲರ್ (40,000 ಕೋಟಿ ರೂ.) ಗಿಂತ ಹೆಚ್ಚು ಮೌಲ್ಯವನ್ನು ಹೊಂದಿದ್ದಾರೆ. ಟೆಲಿಕಾಂ, ಉಪಗ್ರಹಗಳು, ಮಾಧ್ಯಮ, ತೈಲ, ಅನಿಲ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳನ್ನು ಹೊಂದಿದ್ದಾರೆ.
ಆದರೆ ಅಜಾನ್ ಸಿರಿಪಾನ್ಯೊ ತಮ್ಮ 18ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸವನ್ನು ಸ್ವೀಕರಿಸಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಅವರ ತಂದೆ ಆನಂದ್ ಕೃಷ್ಣನ್ ಗೌರವಿಸಿದ್ದಾರೆ. ಅಷ್ಟೇ ಅಲ್ಲದೇ ಆನಂದ್ ಕೃಷ್ಣನ್ ಸ್ವತಃ ಬೌದ್ಧರಾಗಿದ್ದಾರೆ ಎಂದು ವರದಿಯಾಗಿದೆ.